

ಮುಂಬೈ: ಸುಶಾಂತ್ ಸಿಂಗ್ ಮೃತಪಟ್ಟು ಮೂರು ತಿಂಗಳಾಯಿತು. ಅವರ ಗೆಳತಿ ರಿಯಾ ಚರ್ಕವರ್ತಿಯನ್ನು ನಿನ್ನೆ ಎನ್ಸಿಬಿ ಬಂಧಿಸಿದೆ. ಅದರ ಬೆನ್ನಲ್ಲೇ ಸುಶಾಂತ್ ಸಿಂಗ್ ಅವರ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ಅವುಗಳನ್ನು ನೋಡಿದರೆ ಕಸಿವಿಸಿ ಆಗುತ್ತದೆ.
ಈ ವಿಡಿಯೋಗಳನ್ನು ಚಿತ್ರೀಕರಿಸಿದ್ದು ರಿಯಾ ಚಕ್ರವರ್ತಿ ಎನ್ನಲಾಗಿದೆ. ಅದರಲ್ಲಿ ರಿಯಾ ಮಾತನಾಡುವುದು ಕೇಳುತ್ತದೆ. ಹಾಗೇ ಸುಶಾಂತ್ ಅವರ ಮುಖದ ಭಾವ, ಹಾವ ಭಾವಗಳನ್ನು ನೋಡಿದರೆ ಸುಶಾಂತ್ರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಸಂಶಯ ಮೂಡದೆ ಇರದು.
ವಿಡಿಯೋ ನ್ಯೂಸ್ಗಳನ್ನು ಝೀ ನ್ಯೂಸ್ ವೈರಲ್ ಮಾಡಿದೆ. ಒಂದು ವಿಡಿಯೋದಲ್ಲಿ ಸುಶಾಂತ್ ಸಿಂಗ್ ಯಾವುದೋ ಪುಸ್ತಕ ಹಿಡಿದುಕೊಂಡು ಮಲಗಿದ್ದಾರೆ. ಅಲ್ಲಿಗೆ ಬಂದ ರಿಯಾ ಚಕ್ರವರ್ತಿ ಅದೇನು ಎಂದು ಕೇಳುತ್ತಾರೆ. ಸುಶಾಂತ್ ಪುಸ್ತಕವನ್ನು ತೋರಿಸುತ್ತಾರೆ. ನಂತರ ಇಬ್ಬರೂ ಲ್ಯುಡೋ ಆಟದ ಬಗ್ಗೆ ಚರ್ಚಿಸುತ್ತಾರೆ. ಇದನ್ನೂ ಓದಿ: ಕೊನೆಗೂ ಎನ್ಸಿಬಿ ಅಧಿಕಾರಿಗಳ ಎದುರು ಸತ್ಯ ಬಾಯ್ಬಿಟ್ಟ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ
ಹಾಗೇ ಮತ್ತೊಂದು ವಿಡಿಯೋದಲ್ಲಿ ಸುಶಾಂತ್ ಸೋಫಾದ ಕೈ ಮೇಲೆ ಕುಳಿತಿರುತ್ತಾರೆ. ಅವರನ್ನು ವಿಡಿಯೋ ಮಾಡಿದ ರಿಯಾ, ನೀನಿವತ್ತು ತುಂಬ ಮುದ್ದಾಗಿ ಕಾಣಿಸುತ್ತಿದ್ದೀಯಾ ಎಂದು ಸುಶಾಂತ್ಗೆ ಹೇಳುತ್ತಾರೆ. ಆಗ ಅವರು ನಾಚಿಕೊಂಡು, ಮುಖವನ್ನು ತಿರುಗಿಸಿ ಕುಳಿತುಕೊಳ್ಳುತ್ತಾರೆ. ಹಾಗೇ ಅಲ್ಲಿಯೇ ಇದ್ದ ಇನ್ನೋರ್ವರು ಯಾರೋ, ನೀನು ನಿನ್ನ ಔಷಧಿಗಳನ್ನು ತೆಗೆದುಕೊಂಡಿದ್ದೀಯಾ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಸುಶಾಂತ್ ಸಿಂಗ್ ಸೇವಿಸಿಯಾಗಿದೆ ಎಂದು ಹೇಳುತ್ತಾರೆ. ಆದರೆ ರಿಯಾ, ಎಲ್ಲಿ? ನಾನು ಬೆಳಗ್ಗೆ ಕೊಟ್ಟಿದ್ದಷ್ಟೇ, ಆಮೇಲೆ ಮೆಡಿಸಿನ್ ತೆಗೆದುಕೊಂಡಿಲ್ಲ ಎಂದು ಹೇಳುತ್ತಾರೆ. ಇವೆರಡೂ ವಿಡಿಯೋಗಳನ್ನು 2020ರ ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜಿಂದಾಲ್ ಅಧಿಕಾರಿಗಳ ಮುಖವಾಡ ಧರಿಸಿ ಭಿಕ್ಷಾಟನೆ ನಡೆಸಿದ ಅಣ್ಣಾ ಫೌಂಡೇಷನ್ ಅಧ್ಯಕ್ಷ ರಾಜಶೇಖರ ಮುಲಾಲಿ
ಸುಶಾಂತ್ ಸಿಂಗ್ ರಜಪೂತ್ ಮತ್ತು ಲಿವ್ ಇನ್ ರಿಲೇಶನ್ ಶಿಪ್ನಲ್ಲಿ ಇದ್ದವರು. ಜೂ.14ರಂದು ಸುಶಾಂತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ರಿಯಾ ಕಾರಣ. ಅವಳೇ ಪ್ರಚೋದನೆ ಕೊಟ್ಟಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಅದಾದ ನಂತರ ಮಾದಕ ದ್ರವ್ಯದ ನಂಟು ಸುತ್ತಿಕೊಂಡಿತು. ಸ್ವತಃ ರಿಯಾ ಚಕ್ರವರ್ತಿಯೇ ತಾನು ಸುಶಾಂತ್ಗೆ ಡ್ರಗ್ಸ್ ನೀಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಸದ್ಯ ಎನ್ಸಿಬಿ ಅವರನ್ನು ಬಂಧಿಸಿದೆ.
ಹಾಗೇ ಸಿಬಿಐ ಮತ್ತು ಇಡಿ ತನಿಖಾ ದಳಗಳು ಕೂಡ ಇನ್ನೊಂದು ಆಯಾಮದಲ್ಲಿ ತನಿಖೆ ನಡೆಸುತ್ತಿವೆ.
ಸುಶಾಂತ್ ಸಿಂಗ್ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂಬುದು ಈಗಾಗಲೇ ಬೆಳಕಿಗೆ ಬಂದ ವಿಚಾರ. ಆದರೆ ಈ ವಿಡಿಯೋಗಳನ್ನು ನೋಡಿದರೆ ಎಲ್ಲವೂ ಸರಿ ಇರಲಿಲ್ಲ ಎಂಬುದು ಸ್ಪಷ್ಟವಾಗುವುದಂತೂ ಸತ್ಯ.(ಏಜೆನ್ಸೀಸ್)