

ಕಳೆದ ವರ್ಷ ಚಿಚ್ಚೋರೆಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರೂ, ಸುಶಾಂತ್ ಸಿಂಗ್ ಕೈಯಲ್ಲಿ ಯಾವುದೇ ಚಿತ್ರಗಳಿರಲಿಲ್ಲ, ಅದೇ ಬೇಸರದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ, ಕಳೆದೆರೆಡು ದಿನಗಳಿಂದ ಕೇಳಿ ಬರುತ್ತಲೇ ಇದೆ. ಬಾಲಿವುಡ್ನ ಕೆಲವು ಭಲಾಡ್ಯರು ತಮ್ಮನ್ನು ದೂರ ಇಟ್ಟ ಕಾರಣಕ್ಕೆ, ಸುಶಾಂತ್ ಮಾನಸಿಕವಾಗಿ ನೊಂದಿದ್ದರು ಮತ್ತು ಅದೇ ಅವರ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಾವಿನ ಬಾಗಿಲು ತಟ್ಟಿ ಮರಳಿದ್ದರು ಶಿಲ್ಪಾ ಶೆಟ್ಟಿ ಸಹೋದರಿ
ಇದಕ್ಕೆ ಪೂರಕವಾಗಿ ರಾಜಕಾರಣಿ ಸಂಜಯ್ ನಿರುಪಮ್ ಮಾತನಾಡಿದ್ದು, ಚಿಚ್ಚೋರೆ ನಂತರ ಸುಶಾಂತ್ ಸಿಂಗ್ ಅವರು ಕಳೆದ ಆರು ತಿಂಗಳಲ್ಲಿ ಏಳು ಸಿನಿಮಾಗಳನ್ನು ಕಳೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸುಶಾಂತ್ ಕಳೆದ ವರ್ಷ ಚಿಚ್ಚೋರೆ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತರ ಸೂಪರ್ ಹಿಟ್ ಆಗಿತ್ತು. ಆ ನಂತರ ಅವರು ಏಳು ಚಿತ್ರಗಳಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಏಳೂ ಚಿತ್ರಗಳು ಸುಶಾಂತ್ ಸಿಂಗ್ ಅವರ ಕೈತಪ್ಪಿದ್ದವು. ಇದರಿಂದ ಅವರು ಮಾನಸಿಕವಾಗಿ ಬಹಳ ನೊಂದಿದ್ದರು. ಬಾಲಿವುಡ್ ಮಂದಿಯ ಈ ಕ್ರೂರ ನಡೆಯಿಂದಾಗಿ ಸುಶಾಂತ್ರಂತಹ ಪ್ರತಿಭಾವಂತ ಕಲಾವಿದರು ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ. ಸುಶಾಂತ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಕೆಲವೇ ಕೆಲವು ಮಂದಿ ಪೈಕಿ ಸಂಜಯ್ ನಿರುಪಮ್ ಸಹ ಒಬ್ಬರು ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಸೋತವರೆಂದಿಗೂ ಸಾಯುವುದಿಲ್ಲ.. ನೀವ್ಯಾಕೆ ಹೀಗೆ ಮಾಡಿದಿರಿ ಸುಶಾಂತ್?
ಇನ್ನು ಸಂಜಯ್ ನಿರುಪಮ್ ಅವರ ಮಾತು ಪೂರ್ತಿ ಸುಳ್ಳೇನಲ್ಲ. ಏಕೆಂದರೆ, ಸುಶಾಂತ್ ಸಿಂಗ್ ಅವರ ಹೆಸರು ಹಲವು ಚಿತ್ರಗಳಲ್ಲಿ ಕೇಳಿಬಂದಿತ್ತು. ಭಾರತ ಮತ್ತು ಚೀನಾ ನಡುವೆ ನಡೆದ 1962ರ ಯುದ್ಧದ ಕುರಿತಾದ ರೈಫಲ್ಮ್ಯಾನ್, ಆನಂದ್ ಗಾಂಧಿ ನಿರ್ದೇಶನದ ಎಮರ್ಜೆನ್ಸಿ, ಶೇಖರ್ ಕಪೂರ್ ನಿರ್ದೇಶನದ ಪಾನಿ ಮುಂತಾದ ಚಿತ್ರಗಳಲ್ಲಿ ಸುಶಾಂತ್ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ಚಿತ್ರಗಳಲ್ಲಿ ಇದೀಗ ಬೇರೆಯವರು ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ ವೆಬ್ ಸೀರೀಸ್ವೊಂದರಲ್ಲಿ ಅವರು ನಟಿಸಬೇಕಿತ್ತಂತೆ. ಅದು ಸಹ ಅವರ ಕೈತಪ್ಪಿರುವ ಅನುಮಾನಗಳಿವೆ.