

ದಕ್ಷಿಣ ಕನ್ನಡ: ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪತ್ನಿಯ ಸಮೇತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ (Kukke Subramanya) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಟಿ20 ಸರಣಿ ಗೆಲುವಿನ ಬಳಿಕ ಪತ್ನಿ ದೇವಿಶಾರೊಂದಿಗೆ (Devisha Shetty) ಆಗಮಿಸಿ ಆಶ್ಲೇಷ ಬಲಿ ಪೂಜೆ, ಮಹಾಪೂಜೆ ಹಾಗೂ ಅಭಿಷೇಕ ನೆರವೇರಿಸಿದ್ದಾರೆ. ದೇವಾಲಯದ ವತಿಯಿಂದ ದಂಪತಿಯನ್ನು ಗೌರವಿಸಲಾಯಿತು.
ಈ ಹಿಂದೆ ಭಾರತ ಟಿ20 ವಿಶ್ವಕಪ್ ಗೆದ್ದ ಸಮಯದಲ್ಲಿ ಪತ್ನಿ ದೇವಿಶಾ ಶೆಟ್ಟಿ ಜತೆ ಉಡುಪಿಯಲ್ಲಿರುವ ಕಾಪುವಿನ ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಸೂರ್ಯ (Suryakumar Yadav) ಅವರ ಧರ್ಮಪತ್ನಿ ಮೂಲತಃ ಮಂಗಳೂರಿನವರಾಗಿದ್ದು, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಮೊದಲು ಸ್ನೇಹಿತರಾಗಿ ನಂತರ ಪ್ರೀತಿಗೆ ಜಾರಿದವರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಗೆಲುವಿನ ಬಳಿಕ ದಂಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಸ್ಥಳೀಯರನ್ನು ಮಾತನಾಡಿಸಿದ್ದಾರೆ.
ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದ ಭಾರತ ತಂಡವು ನಾಯಕ ಸೂರ್ಯಕುಮಾರ್ (Suryakumar Yadav) ನೇತೃತ್ವದಲ್ಲಿ ಹಲವು ದಾಖಲೆಗಳನ್ನು ಛಿದ್ರ ಮಾಡಿತ್ತು. ಇದು ಭಾರತಕ್ಕೆ ಒಟ್ಟಾರೆ ಮೂರನೇ ಸರಣಿ ಗೆಲುವಾಗಿದೆ.