

ಸಿಡ್ನಿ: ಭಾರತ ನೆದರ್ಲೆಂಡ್ ವಿರುದ್ಧ 56 ರನ್ಗಳ ಜಯ ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಪಡೆ 179ರನ್ ಕೆಲೆ ಹಾಕಿತು. ಆರಂಭದಲ್ಲಿಯೇ ಕೆ.ಎಲ್. ರಾಹುಲ್ ವಿಕೆಟ್ ಕಳೆದುಕೊಂಡಾಗ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ರೋಗಿತ್ ಶರ್ಮಾ ಔಟ್ ಆದ ನಂತರ ಸೂರ್ಯಕುಮಾರ್ ಯಾದವ್, ಕೊಹ್ಲಿ ಜೊತೆಯಾದರು.
20ನೇ ಓವರ್ನ ಕೊನೆಯ ಬಾಲ್ನ್ನು ಸೂರ್ಯಕುಮಾರ್ ಯಾದವ್ ಸಿಕ್ಸ್ ಸಿಡಿಸಿದರು. ಫೈನ್ ಲೆಗ್ನತ್ತ ಬಾರಿಸಿದ ಬಾಲ್, ನೇರವಾಗಿ ಸಿಕ್ಸರ್ ಸಿಡಿಯಿತು. ಈ ವೇಳೆ ಕ್ರಿಸ್ನ ಇನ್ನೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಸೂರ್ಯಕಯಮಾರ್ ಯಾದವ್ ಹತ್ತಿರ ಬಂದು ವಿಶಿಷ್ಟವಾಗಿ ಸಂಭ್ರಮಿಸಿದರು. ಕೊಹ್ಲಿ ಎರಡೂ ಕೈಗಳನ್ನೆತ್ತಿ ತಮ್ಮ ಜೋಶ್ ಹೊರಹಾಕಿದರು. ಈ ವೇಳೆ ಸೂರ್ಯಕುಮಾರ್ ಕೂಡ ಕೊಹ್ಲಿಯ ಶೈಲಿಯಲ್ಲೇ ಸಂಭ್ರಮಿಸಿದರು.
ರೋಹಿತ್ ಶರ್ಮಾ ಔಟ್ ಆದ ನಂತರ ಕೊಹ್ಲಿ - ಸೂರ್ಯಕುಮಾರ್ ಜೋಡಿ ಅದ್ಭುತವಾಗಿಯೇ ಇನ್ನಿಂಗ್ಸ್ ಕಟ್ಟಿದರು. ವಿರಾಟ್ ಕೊಹ್ಲಿ 62 ರನ್ ಗಳಿಸಿದರೆ, ಸೂರ್ಯಕುಮಾರ್ 51 ರನ್ ಗಳಿಸಿ ಮಿಂಚಿದರು. ಇದರೊಂದಿಗೆ ಈ ಜೋಡಿ 48 ಎಸೆತಗಳಲ್ಲಿ 95 ರನ್ಗಳ ಜೊತೆಯಾಟ ಕಾಣಿಕೆ ನೀಡಿದರು.