ಉಳ್ಳಾಲ: ದೈಹಿಕ, ಮಾನಸಿಕ ಮತ್ತು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಬೆಳಗ್ಗೆ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆ ಅಗತ್ಯ ಎಂದು ಶ್ರೀನಿವಾಸ ವೈದ್ಯಕೀಯ ಸಂಸ್ಥೆಯ ಶರೀರಶಾಸ ವಿಭಾಗದ ಪ್ರಾಧ್ಯಾಪಕ ಡಾ.ಕುನಾಲ್ ಹೇಳಿದರು.
ಸೂರ್ಯ ಜಯಂತಿ ಪ್ರಯುಕ್ತ ತಲಪಾಡಿ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಆವರಣದಲ್ಲಿ 108 ಸುತ್ತುಗಳ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಹಾಗೂ ಶಾರದಾ ವಿದ್ಯಾನಿಕೇತನ ವಸತಿ ಶಾಲೆಯ 300 ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಆಯುರ್ಧಾಮದ ಆವರಣದಲ್ಲಿ ಬೆಳಗ್ಗೆ 6ರಿಂದ 8.15ರವರೆಗೆ ಕಾರ್ಯಕ್ರಮ ನಡೆಯಿತು.
ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ನಂದೀಶ್ ಎನ್.ಎಸ್., ಕಾರ್ಯಕ್ರಮ ಉಸ್ತುವಾರಿ ಡಾ.ಶರತ್ ಕೆಪಿಎಂ., ಡಾ.ನಯನಶ್ರೀ ಭಾಗವಹಿಸಿದ್ದರು.

ನಂಬಿಕೆ, ವಿಶ್ವಾಸದಿಂದ ಅಭಿವೃದ್ಧಿ ಸಾಧ್ಯ : ಕಾರ್ನಾಡು ಕ್ಷೇತ್ರ ಬ್ರಹ್ಮಕಲಶದಲ್ಲಿ ಎನ್.ವಿನಯ ಹೆಗ್ಡೆ ಅಭಿಮತ