ಶರಣರ ಮಾರ್ಗದಲ್ಲಿ ಮುನ್ನಡೆಯೋಣ

04 Ylb01
ಯಲಬುರ್ಗಾ ತಾಲೂಕಿನ ಮರಕಟ್ ಶಿವಾನಂದ ಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಚಿಂತಕ ತಿಮ್ಮನಗೌಡ ಚಿಲ್ಕರಾಗಿ ಮಾತನಾಡಿದರು. ಬಸವ ಕೇಂದ್ರದ ಗೌರವಾಧ್ಯಕ್ಷ ಹನುಮಗೌಡ ಬಳ್ಳಾರಿ, ಪ್ರಮುಖರಾದ ಬಸವರಾಜಪ್ಪ ಇಂಗಳದಾಳ, ಬಸವರಾಜಪ್ಪ ತುರುವಿಹಾಳ ಇದ್ದರು.
Published on

ಯಲಬುರ್ಗಾ: ಸಮಾಜದ ಒಳಿತಿಗಾಗಿ ಶ್ರಮಿಸಿದ ಶರಣರ ಆದರ್ಶ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಿಂತಕ ತಿಮ್ಮನಗೌಡ ಚಿಲ್ಕರಾಗಿ ಹೇಳಿದರು.

ತಾಲೂಕಿನ ಮರಕಟ್ ಶಿವಾನಂದ ಮಠದಲ್ಲಿ ಬಸವ ಕೇಂದ್ರದಿಂದ ಮಂಗಳವಾರ ಹಮ್ಮಿಕೊಂಡಿದ್ದ 119ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶ್ರಾವಣ ಮಾಸ ನಿಮಿತ್ತ ತಿಂಗಳ ಪರ್ಯಂತ ವಚನಗಳ ನಡೆ ಮನ ಮನೆಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಾದಿ ಶರಣರು 12ನೇ ಶತಮಾನದಲ್ಲಿ ಧಾರ್ಮಿಕ ರಂಗದಲ್ಲಿ ನಡೆಯುತ್ತಿರುವ ಅಂಧಶ್ರದ್ಧೆ ಮತ್ತು ಮೂಢನಂಬಿಕೆ ವಿರುದ್ಧ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ವೈದಿಕಶಾಹಿ ವಿರುದ್ಧ, ಜನಸಾಮಾನ್ಯರು, ನೊಂದವರ ಪರವಾಗಿ ವಚನ ಸಾಹಿತ್ಯ ಉದಯಿಸಿತು. ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದರು.

ರಾಯಚೂರು ಬಸವ ಕೇಂದ್ರದ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ ಮಾತನಾಡಿ, ಸಕಲ ಜೀವ ರಾಶಿಗಳಿಗೆ ಲೇಸಾಗಬೇಕೆಂಬುದು ಬಸವಾದಿ ಶರಣರ ಆಶಯ. ಮನ ಮನೆಗಳಿಗೆ ವಚನಗಳ ನಡೆ ಕಾರ್ಯಕ್ರಮ ಜನರ ಮನಸ್ಸನ್ನು ಕ್ರಿಯಾಶೀಲಗೊಳಿಸುವುದಲ್ಲದೆ ಸಮಾಜದ ಬದಲಾವಣೆಗೆ ಸಹಕಾರಿ ಎಂದರು.

ಮರಕಟ್ ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ, ಗೌರವಾಧ್ಯಕ್ಷ ಹನುಮಗೌಡ ಬಳ್ಳಾರಿ, ಪ್ರಮುಖರಾದ ಬಸವರಾಜಪ್ಪ ಇಂಗಳದಾಳ, ಬಸವರಾಜಪ್ಪ ತುರುವಿಹಾಳ, ನಾಗನಗೌಡ ಜ್ಯಾಲಿಹಾಳ, ಪಾಲಕ್ಷಪ್ಪ ಕಲ್ಲಭಾವಿ, ಹನುಮಂತಪ್ಪ ಗದ್ದಿ, ವಿರುಪಣ್ಣ ತಾಳಕೇರಿ, ಯಮನೂರಪ್ಪ ಬೇವೂರು, ಪಂಪಣ್ಣ ಹುಲಿಯಾಪುರ, ಕೇಶಣ್ಣ ಚೌಡಾಪುರ, ಹನುಮಂತಪ್ಪ ಹುಣಿಸಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net