

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ಸುರೇಶ್ ರೈನಾ ಹೊಸ ಉದ್ಯಮ ಆರಂಭಿಸಿದ್ದು, ನೆದರ್ಲೆಂಡ್ ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಂನಲ್ಲಿ ‘ರೈನಾ ಇಂಡಿಯನ್ ರೆಸ್ಟೋರೆಂಟ್’ ಹೆಸರಿನ ನೂತನ ಹೋಟೆಲ್ ತೆರೆದಿದ್ದಾರೆ. ಇದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಕ್ರಿಕೆಟ್ ಜತೆಗೆ ಆಹಾರ ಮತ್ತು ಅಡುಗೆಯ ಮೇಲಿನ ನನ್ನ ಉತ್ಸಾಹ, ಪ್ರೀತಿಯನ್ನು ನೋಡಿದ್ದೀರಿ. ಈಗ, ಭಾರತದ ವಿವಿಧ ಭಾಗಗಳಿಂದ ಯುರೋಪ್‌ನ ಹೃದಯ ಭಾಗದಲ್ಲಿ ಭಾರತೀಯರ ಆಹಾರ ಶೈಲಿ ಹಾಗೂ ಖಾದ್ಯಗಳ ಬಗ್ಗೆ ಯುರೋಪ್‌ನ ಜನರಿಗೆ ಹಾಗೂ ಇಲ್ಲಿನ ಭಾರತೀಯರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು. ರೆಸ್ಟೋರೆಂಟ್‌ನಲ್ಲಿ ಉತ್ತರ ಭಾರತೀಯ ಜತೆಗೆ ದಕ್ಷಿಣ ಭಾರತೀಯ ಖಾದ್ಯಗಳು ದೊರೆಯಲಿವೆ’ ರೈನಾ ಎಂದು ತಿಳಿಸಿದ್ದಾರೆ.
2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ೋಷಿಸಿರುವ ರೈನಾ, ಮೂಲಃತ ಉತ್ತರ ಪ್ರದೇಶದವರು. 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.