ಪೇದೆ ಕಿವಿ ಕಚ್ಚಿದ ಶಿಕ್ಷಕ

HN 13-2
Published on

ವಿಜಯಪುರ: ಸಮುದಾಯ ಭವನದ ಕೀ ಕೇಳಿದ್ದಕ್ಕೆ ಭೂಪನೊಬ್ಬ ಪೇದೆಯ ಕಿವಿಯನ್ನೇ ಕಚ್ಚಿದ್ದಾನೆ.
ವಿಜಯಪುರ ತಾಲೂಕಿನ ಮಹಲ್‌ಐನಾಪುರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಖಾಸಗಿ ಶಾಲೆ ಶಿಕ್ಷಕ ಸುರೇಶ ಲಾಲಸಿಂಗ ಚವಾಣ್ (45) ಎಂಬಾತ ಗ್ರಾಮೀಣ ಠಾಣೆ ಪೇದೆ ಬಾಬು ಕಡಣಿ ಅವರ ಕಿವಿಗೆ ಕಚ್ಚಿದ್ದಾನೆ. ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಹಿನ್ನೆಲೆ

ಮಹಾರಾಷ್ಟ್ರದಿಂದ ಆಗಮಿಸಿದ ಕೂಲಿ ಕಾರ್ಮಿಕರನ್ನು ಹೋಮ್ ಕ್ವಾರಂಟೈನ್ ಮಾಡಲು ಮಹಲ್ ಐನಾಪುರ ತಾಂಡಾದಲ್ಲಿರುವ ಸೇವಾಲಾಲ್ ಭವನವನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದ ಹಿನ್ನೆಲೆ ತಹಸೀಲ್ದಾರ್ ಮೋಹನಕುಮಾರಿ, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಹಾಗೂ ಪೇದೆ ಬಾಬು ಕಡಣಿ ತಾಂಡಾಕ್ಕೆ ಭೇಟಿ ನೀಡಿದಾಗ ಭವನಕ್ಕೆ ಬೀಗ ಹಾಕಲಾಗಿತ್ತು. ಕೀ ಕೇಳಲು ಹೋದಾಗ ಶಿಕ್ಷಕ ಸುರೇಶ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಪೇದೆ ಕಿವಿ ಕಚ್ಚಿದ್ದಾನೆ. ಈ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net