

ಸೂರತ್ (ಗುಜರಾತ್): ಸೂರತ್ ನಗರದ ಬೀದಿಗಳಲ್ಲಿ ಭಿಕ್ಷಾಟನೆ ಮತ್ತು ಚಿಂದಿ ಆಯುತ್ತಿದ್ದ 53 ಜನ ಮಕ್ಕಳನ್ನು ರಕ್ಷಿಸಿ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಸ್ಥಳೀಯ ಪೊಲೀಸರ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಘಟಕದ (ಎಎಚ್ಟಿಯು) ಒಟ್ಟು 30 ತಂಡಗಳು ಒಂದು ತಿಂಗಳಿನಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಪೋಷಕರು ಸಲಹೆಯಂತೆ ಈ ಮಕ್ಕಳು ನಗರದ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಕ್ಕಳು ಗುಜರಾತ್, ಬಿಹಾರ, ಮಹಾರಾಷ್ಟ್ರ ಮತ್ತು ರಾಜಸ್ಥಾನಕ್ಕೆ ಸೇರಿದವರು. ಅವರಲ್ಲಿ ಹೆಚ್ಚಿನವರು ತಮ್ಮ ಪೋಷಕರ ಸೂಚನೆಯಂತೆ ಜೀವನೋಪಾಯಕ್ಕಾಗಿ ಚಿಂದಿ ಆಯುವ ಮತ್ತು ಭಿಕ್ಷೆ ಬೇಡುವ ಕೆಲಸದಲ್ಲಿದ್ದರು. ಇವರಲ್ಲಿ ಕೆಲವು ಮಕ್ಕಳು ಅನಾಥರಾಗಿದ್ದರು ಎಂದು ಪೊಲೀಸರತು ತಿಳಿಸಿದ್ದಾರೆ.