RBI ಕ್ರಮ ಪ್ರಶ್ನಿಸಿ ಅರ್ಜಿ; ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ

Supreme 2k note
Published on

ನವದೆಹಲಿ: ಯಾವುದೆ ತರಹದ ಅರ್ಜಿ, ಗುರುತಿನ ಚೀಟಿ ಇಲ್ಲದೆಯೇ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ RBI ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಿರಾಕರಿಸಿದೆ.

ಭಾರತೀಯ ರಿಸರ್ವ್​ ಬ್ಯಾಂಕ್(RBI) ಹಾಗೂ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ(SBI)​ ಹೊರಡಿಸಿದ ಅಧಿಸೂಚನೆಗಳನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ತಕ್ಷಣವೇ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿ ಕೋರ್ಟ್​ ಅರ್ಜಿಯನ್ನು ತಳ್ಳಿಹಾಕಿದೆ.

ಫಲಪ್ರದವಾಗಿರುವುದಿಲ್ಲ

ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ್​ ಬೋಸ್​ ಹಾಗೂ ರಾಜೇಶ್​ ಬಿಂದಲ್​ ಅವರಿದ್ದ ದ್ವಿಸದಸ್ಯ ಪೀಠವು ಬೇಸಿಗೆ ರಜೆ ಮುಗಿದ ನಂತರ ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಅವರಲ್ಲಿ ಮಂಡಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿತ್ತು.

ಇದಕ್ಕೂ ಮುನ್ನ ಮಾತನಾಡಿದ ವಕೀಲ ಅಶ್ವಿನಿ ಕಳೆದ 10 ದಿನಗಳಲ್ಲಿ 1.8 ಲಕ್ಷ ಕೋಟಿ ರೂ. ಮೌಲ್ಯದ 2,000 ₹ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಲಾಗಿದೆ. ರಜೆಯ ನಂತರ ಅರ್ಜಿ ವಿಚಾರಣೆ ನಡೆಸಿದರೆ ಫಲಪ್ರದವಾಗಿರುವುದಿಲ್ಲ. ಬದಲಾವಣೆಯಾಗಿರುವ ಎಲ್ಲಾ ನೋಟುಗಳು ಕಪ್ಪುಹಣವಾಗಿದ್ದು ಜುಲೈ ವೇಳೆ ಸಂಪೂರ್ಣವಾಗಿ ವಿನಿಮಯವಾಗಿರಲಿದೆ ಎಂದು ನ್ಯಾಯಪೀಠದ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net