More

    ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಸಂಸ್ಥೆ ಪಾವತಿಸಬೇಕಿದ್ದ ಒಂದೇ ಒಂದು ಪೈಸಾ ಬಂದಿಲ್ಲ; ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

    ನವದೆಹಲಿ: ಬ್ಯಾಂಕುಗಳಿಗೆ ನೀಡಬೇಕಿದ್ದ ಹಣವನ್ನು ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಸಂಸ್ಥೆ “ಒಂದೇ ಒಂದು ಪೈಸಾ ಬಂದಿಲ್ಲ” ಪಾವತಿಸಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಹೇಳಿದ್ದಾರೆ.

    ನಾರಿಮನ್​ ಅವರ ಪೀಠದಿಂದ ಪ್ರಕರಣದ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠಕ್ಕೆ ಸದ್ಯದಲ್ಲೇ ವರ್ಗವಾಗಲಿದೆ.

    ಕಳೆದ ಜೂನ್​ನಲ್ಲಿ ಉದ್ಯಮಿ ಮಲ್ಯ ತಮ್ಮ ಒಡೆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ತಡೆಯುವಂತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ವಿರುದ್ಧ ಆರೋಪಿಸಿರುವ ತನಿಖಾ ಸಂಸ್ಥೆಗಳ ವಾದ ಸುಳ್ಳು ಎಂದು ಅರ್ಜಿಯಲ್ಲಿ ತಿಳಿಸಿದ್ದರು.

    ಪ್ರಕರಣ ಸಂಬಂಧ ಕಳೆದ ಬಾರಿ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಪರ ವಾದಿಸಿದ್ದ ಹಿರಿಯ ವಕೀಲ ತುಷಾರ್​ ಮೆಹ್ತಾ, ಮಲ್ಯ ಮತ್ತು ಸಂಬಂಧ ಪಟ್ಟ ಸಂಸ್ಥೆಗಳು ಪಡೆದ ಸಾಲವನ್ನು ಮರಳಿಸುತ್ತೇವೆ ಎಂದು ವರ್ಷಗಳಿಂದ ಹೇಳುತ್ತ ಬಂದಿವೆ. ಆದರೆ ಈವರೆಗೆ ಒಂದೇ ಒಂದು ರೂಪಾಯಿಯನ್ನು ಪಾವತಿಸಿಲ್ಲ ಎಂದು ಕೋರ್ಟ್​ಗೆ ತಿಳಿಸಿದ್ದರು.

    ಇದೇ ವಿಚಾರಣೆ ಸಂದರ್ಭದಲ್ಲಿ ಮಲ್ಯ ಪರ ವಕೀಲರು ವಾದ ಮಂಡಿಸಿ, ಬ್ಯಾಂಕುಗಳು ಭಾರತೀಯ ನ್ಯಾಯಾಲಯಗಳ ಮೂಲಕ ಸಾಲವನ್ನು ಹಿಂಪಡೆಯುವುದಾಗಿ ತಿಳಿಸಿವೆ. ಯುಕೆಯಲ್ಲೂ ದಿವಾಳಿತನದ ಅರ್ಜಿಯನ್ನು ಸಲ್ಲಿಸಿದ್ದು ಅದನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.

    ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆಗಳನ್ನು ಸ್ಥಾಪಿಸಿದ್ದ ಉದ್ಯಮಿ ವಿಜಯ್​ ಮಲ್ಯ, 9,000 ಕೋಟಿ ರೂಪಾಯಿಗಳಷ್ಟು ಹಣಕಾಸಿನ ಅಕ್ರಮಗಳ ಆರೋಪ ಎದುರಿಸಿದ್ದರು. 2016 ಮಾರ್ಚ್​ನಲ್ಲಿ ಬ್ರಿಟನ್‌ಗೆ ಪಲಾಯನ ಮಾಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts