More

    ಸನ್‌ರೈಸರ್ಸ್‌ ಗೆಲ್ಲಿಸಿದ ಮನೀಷ್, ವಿಜಯ್ ಶಂಕರ್; ವಾರ್ನರ್ ಪಡೆ ಪ್ಲೇ-ಆಫ್ ಆಸೆ ಜೀವಂತ

    ದುಬೈ: ಕನ್ನಡಿಗ ಮನೀಷ್ ಪಾಂಡೆ (83*ರನ್, 47 ಎಸೆತ, 4 ಬೌಂಡರಿ, 8 ಸಿಕ್ಸರ್) ಹಾಗೂ ಆಲ್ರೌಂಡರ್ ವಿಜಯ್ ಶಂಕರ್ (52*ರನ್, 51ಎಸೆತ, 6 ಬೌಂಡರಿ) ಜೋಡಿಯ ಬಿರುಸಿನ ಬ್ಯಾಟಿಂಗ್ ಹಾಗೂ ಜೇಸನ್ ಹೋಲ್ಡರ್ (33ಕ್ಕೆ 3) ಮಾರಕ ದಾಳಿ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-13ರಲ್ಲಿ ಗೆಲುವಿನ ಹಾದಿಗೆ ಮರಳಿತು. ಗುರುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ ರಾಜಸ್ಥಾನ ರಾಯಲ್ಸ್ ಎದುರು 8 ವಿಕೆಟ್‌ಗಳಿಂದ ಸುಲಭ ಜಯ ದಾಖಲಿಸಿತು. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಡೇವಿಡ್ ವಾರ್ನರ್ ಬಳಗ ಲೀಗ್‌ನಲ್ಲಿ 4ನೇ ಜಯ ದಾಖಲಿಸಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿತು.
    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 6 ವಿಕೆಟ್‌ಗೆ 154 ರನ್ ಪೇರಿಸಿತು. ಪ್ರತಿಯಾಗಿ ಜೋಫ್ರಾ ಆರ್ಚರ್ (21ಕ್ಕೆ 2) ಮಾರಕ ದಾಳಿ ನಡುವೆಯೂ ಮನೀಷ್ ಪಾಂಡೆ ಹಾಗೂ ವಿಜಯ್ ಶಂಕರ್ ಜೋಡಿ ಮುರಿಯದ 3ನೇ ವಿಕೆಟ್‌ಗೆ 93 ಎಸೆತಗಳಲ್ಲಿ 140 ಜತೆಯಾಟದ ಫಲವಾಗಿ ಸನ್‌ರೈಸರ್ಸ್‌ 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 156 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts