9 ತಿಂಗಳ ನಂತ್ರ ಭೂಮಿಗೆ ಬರ್ತೀರೋ ಸುನೀತಾ ವಿಲಿಯಮ್ಸ್​​ಗೆ ನಡೆಯಲು ಸಾಧ್ಯವಾಗಲ್ಲ! ದೃಷ್ಟಿ, ಮೂಳೆ ದುರ್ಬಲ..ಕಾಡಲಿದೆ ಆರೋಗ್ಯ ಸಮಸ್ಯೆ.. Sunita Williams Face Painful Return 

Sunita William

ನವದೆಹಲಿ: (Sunita Williams Face Painful Return) ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್, ಸುಮಾರು 8 ತಿಂಗಳಿಗೂ ಅಧಿಕ ಸಮಯದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಸಿಲುಕ್ಕಿದ್ದಾರೆ. ಕಳೆದ ವರ್ಷ ಜೂನ್ 5ರಂದು ಬೋಯಿಂಗ್ ಸ್ಟಾರ್​ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು. ಕೆಲಸ ಮುಗಿಸಿ ಒಂದೇ ವಾರದಲ್ಲಿ ಭೂಮಿಗೆ ಮರಳಬೇಕಿತ್ತು. ಆದಾಗ್ಯೂ, ಸ್ಟಾರ್‌ಲೈನರ್‌ನ ಪ್ರೊಪಲ್ಷನ್ ಸಿಸ್ಟಮ್‌ನ ಸಮಸ್ಯೆಯಿಂದಾಗಿ ಎಂಟು ದಿನಗಳ ಪ್ರವಾಸವನ್ನು ಹಲವಾರು ಬಾರಿ ವಿಸ್ತರಿಸಲಾಯಿತು. ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಕಾರಣ, ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಸ್ಟಾರ್​ಲೈನರ್ ಭೂಮಿಗೆ ಮರಳಿತು.

ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ನಾಸಾದ ಪ್ರಯತ್ನಗಳು ಈವರೆಗೂ ಸಾಕಷ್ಟು ಬಾಗಿ ವಿಫಲವಾಗಿವೆ. ಆದರೀಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ದೀರ್ಘ ಕಾಯುವಿಕೆ ಕೊನೆಗೊಳ್ಳಲಿದೆ. ಸುನಿತಾ ವಿಲಿಯಮ್ಸ್​ ಮತ್ತು ಬಚ್​ ವಿಲ್ಮೋರ್​ ಅವರನ್ನು ಭೂಮಿಗೆ ಸುರಕ್ಷಿತವಾಗಿ ಮರಳಿ ಕರೆತರಲು ಕ್ಷಣಗಣನೆ ಆರಂಭವಾಗಿದೆ. ಆದರೆ  ಸುನೀತಾ ಅವರು ಬಂದ್ರೆ ಅವರಿಗೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳ ಬಹುದು  ಎನ್ನುವ ಕುರಿತಾಗಿ ಕೆಲವು ವರದಿಗಳು ಬಂದಿವೆ ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ…

ಸುನೀತಾ ವಿಲಿಯಮ್ಸ್ ನಡೆಯಲು ಸಾಧ್ಯವಾಗದೇ ಇರಬಹುದು..:

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 19 ರೊಳಗೆ ಅಮೆರಿಕದ ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದಾರೆ. 9 ತಿಂಗಳು ಬಾಹ್ಯಾಕಾಶದಲ್ಲಿ ಕಳೆದ ನಂತರ ಸುನೀತಾ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.  ಭೂಮಿಗೆ ಹಿಂತಿರುಗಿದಾಗ  ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ…

ಮಾರ್ಚ್ 19 ರಂದು ಭೂಮಿಗೆ ಮರಳಿದಾಗ ಸುನೀತಾ ವಿಲಿಯಮ್ಸ್ ಅವರಿಗೆ “ಶಿಶು ಪಾದಗಳು” ( baby feet) ಹಾಗೆ ಆಗುವ ಸಾಧ್ಯತೆ ಇದೆ. ಇದು ಪಾದಗಳನ್ನು ಮಗುವಿನ ಪಾದಗಳಂತೆ ಮೃದುವಾಗಿಸುತ್ತದೆ. ಅವರಿಗೆ ನಡೆಯುವುದು ಕಷ್ಟವೆನಿಸುತ್ತದೆ. ಗಗನಯಾತ್ರಿಗಳ ಪಾದಗಳು ತಿಂಗಳುಗಟ್ಟಲೆ ಬಾಹ್ಯಾಕಾಶದಲ್ಲಿ ಕಳೆದ ನಂತರ ಮಗುವಿನಂತೆ ಮೃದುವಾಗುತ್ತವೆ. ಅವರಿಗೆ ನಡೆಯಲು ನೋವುಂಟುಮಾಡುತ್ತದೆ.

ಸುನೀತಾ ಬಾಹ್ಯಾಕಾಶದಲ್ಲಿ 9 ತಿಂಗಳು ಕಳೆದರು. ನೆಲದ ಮೇಲೆ ಹೆಜ್ಜೆ ಇಡಲಿಲ್ಲ. ಅದಕ್ಕಾಗಿಯೇ ಅವಳು ಭೂಮಿಗೆ ಹಿಂತಿರುಗಿದಾಗ ನಡೆಯಲು ಕಷ್ಟಪಡಬಹುದು. ನೆಲದ ಮೇಲೆ ನಡೆಯಲು  ಪಾದಗಳು ಮೊದಲಿನಂತೆ ಸುಲಭವಾಗಿ ಸಹಕರಿಸದಿರಬಹುದು.

ನೆಲದ ಮೇಲೆ ನಡೆಯುವಾಗ, ನಮ್ಮ ಪಾದಗಳು ಗುರುತ್ವಾಕರ್ಷಣೆ ಇರುತ್ತದೆ. ಪಾದಗಳ ಅಡಿಭಾಗದಲ್ಲಿರುವ ಚರ್ಮವು ದಪ್ಪವಾಗುತ್ತದೆ.  ಆದರೆ ಅಲ್ಲಿ ಅವರು ನೆಲದ ಮೇಲೆ ಹೆಜ್ಜೆ ಇಟ್ಟಿರುವುದಿಲ್ಲ ಹೀಗಾಗಿ ಹೆಚ್ಚಿನ ಪ್ರತಿರೋಧವನ್ನು ಎದುರಿಸುವ ಸಾಧ್ಯತೆ ಇದೆ.

ತಿಂಗಳುಗಟ್ಟಲೆ ಬಾಹ್ಯಾಕಾಶದಲ್ಲಿ ಕಳೆಯುವುದರಿಂದ  ಪಾದಗಳ ಮೇಲಿನ ಗಟ್ಟಿಯಾದ ಚರ್ಮವು ಇರುವುದಿಲ್ಲ. ಪರಿಣಾಮವಾಗಿ, ಪಾದಗಳು ಮೃದುವಾಗುತ್ತವೆ. ಪಾದದ ಚರ್ಮ ಗಟ್ಟಿಯಾಗಲು ಕೆಲವು ವಾರಗಳಿಂದ ತಿಂಗಳುಗಳವರೆಗೆ ತೆಗೆದುಕೊಳ್ಳುತ್ತದೆ. ಸ್ಥಿತಿ ಸುಧಾರಿಸುವವರೆಗೆ, ಸುನೀತಾ ವಿಲಿಯಮ್ಸ್‌ಗೆ ನಡೆಯುವುದು ಕಷ್ಟವಾಗಬಹುದು ಮತ್ತು ನೋವಿನಿಂದ ಕೂಡಿರುತ್ತದೆ.

ಆರೋಗ್ಯ ಸಮಸ್ಯೆಗಳು  ಕಾಡುವುದು  ಹೆಚ್ಚು..

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ದೀರ್ಘಕಾಲ ಅಲ್ಲಿಯೇ ಇರುವುದರಿಂದ ಗಗನಯಾತ್ರಿಗಳ ಮೂಳೆ ಅಷ್ಟೊಂದು ಗಟ್ಟಿಯಾಗಿರುವುದಿಲ್ಲ, ಸ್ನಾಯುಗಳು ದುರ್ಬಲವಾಗುತ್ತವೆ. ಸಾಮಾನ್ಯವಾಗಿ ಭೂಮಿಯ ಮೇಲೆ ಚಲಿಸುವುದರಿಂದ ಸಕ್ರಿಯಗೊಳ್ಳುವ ಸ್ನಾಯುಗಳು ಸಹ ದುರ್ಬಲಗೊಳ್ಳುತ್ತವೆ.

ಗಗನಯಾತ್ರಿಗಳ ದೇಹದಲ್ಲಿ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ.  ಹೃದಯವು ಗುರುತ್ವಾಕರ್ಷಣೆಯ ವಿರುದ್ಧ ರಕ್ತವನ್ನು ಪಂಪ್ ಮಾಡುವ ಅಗತ್ಯವಿಲ್ಲ. ಈ ಪರಿಣಾಮವಾಗಿ, ಹೃದಯವು ತುಂಬಾ ಕಡಿಮೆ ಕೆಲಸ ಮಾಡಬೇಕಾಗುತ್ತದೆ. ಗಗನಯಾತ್ರಿಗಳ ದೇಹದಲ್ಲಿ ರಕ್ತ ಹರಿಯುವ ವಿಧಾನವೂ ಬದಲಾಗುತ್ತದೆ.

ದೇಹದಲ್ಲಿ ದ್ರವಗಳು ಸಂಗ್ರಹವಾಗುತ್ತವೆ ಮತ್ತು ಹುಬ್ಬುಗಳ ಆಕಾರ ಬದಲಾಗುತ್ತದೆ. ದೃಷ್ಟಿ ದುರ್ಬಲವಾಗುತ್ತದೆ. ಇದೇ ಕಾರಣಕ್ಕೆ ಅನೇಕ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕನ್ನಡಕ ಧರಿಸಿ ಓಡಾಡುವುದು ಕಂಡುಬರುತ್ತದೆ.

ಬಾಹ್ಯಾಕಾಶದಲ್ಲಿ ದೀರ್ಘಕಾಲ ಕಳೆಯುವುದರಿಂದ ವಿಕಿರಣದಿಂದಾಗಿ ಗಗನಯಾತ್ರಿಗಳ ಮೇಲೆ ಪರಿಣಾಮ ಬೀರಬಹುದು. ಭೂಮಿಯ ಕಾಂತಕ್ಷೇತ್ರದಲ್ಲಿ ಸಿಕ್ಕಿಬಿದ್ದ ಕಣಗಳು, ಸೂರ್ಯನಿಂದ ಬರುವ ಸೌರ ಕಾಂತೀಯ ಕಣಗಳು ಮತ್ತು ಗ್ಯಾಲಕ್ಸಿಯ ಕಾಸ್ಮಿಕ್ ಕಿರಣಗಳಿಂದ ಗಗನಯಾತ್ರಿಗಳು ಪ್ರಭಾವಿತರಾಗುತ್ತಾರೆ.

Share This Article

ಈ ಆಹಾರಗಳನ್ನು ಎಂದಿಗೂ ಮತ್ತೆ ಬಿಸಿ ಮಾಡಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ… Never reheat these foods

Never reheat these foods:  ಮನೆಗಳಲ್ಲಿ ಉಳಿದ ಆಹಾರವನ್ನು ಬಿಸಿ ಮಾಡಿ ನಂತರ ತಿನ್ನುವುದು ಸಾಮಾನ್ಯ.…

ಮಾವಿನಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ ಗೊತ್ತಾ? mango

mango: ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಮಾವು ಕೂಡ ಒಂದು.   ಅನೇಕರು ಮಾವಿನಹಣ್ಣು ತಿಂದ ನಂತರ ನೀರು…

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

Stress : ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡ ಅನುಭವಿಸೋದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ…