ಕಾಂಗ್ರೆಸ್​ ನಾಯಕರಿಗೆ ಕಿವಿಗೆ ಹೂ ಮುಡಿಯುವ ಐಡಿಯಾ ಕೊಟ್ಟಿದ್ದೇ ಈತ!

sunil kangolu
Published on

ಬೆಂಗಳೂರು: ನಿನ್ನೆ ಬಜೆಟ್ ಹಿನ್ನಲೆಯಲ್ಲಿ ಕೈ ಮುಖಂಡರು ಕಿವಿಗೆ ಹೂ ಮುಡಿದುಕೊಂಡು ಬಂದಿದ್ದರು. ಈ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದಷ್ಟೇ ಅಲ್ಲದೇ ಸಾಕಷ್ಟು ಪ್ರಚಾರವನ್ನೂ ಪಡೆದಿದೆ.

ಹೀಗಾಗಿ ಈ ಐಡಿಯಾವನ್ನು ಕಾಂಗ್ರೆಸ್​ ನಾಯಕರಿಗೆ ಕೊಟ್ಟಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಕಾಂಗ್ರೆಸ್ ನಾಯಕರು, ಏಕಾಏಕಿ ಹೂ ಮುಡಿದುಕೊಂಡು ಬಂದಿಲ್ಲ ಎನ್ನುವುದು ಸ್ಪಷ್ಟವಾಗಿದ್ದು ಈ ಐಡಿಯಾ ಹಿಂದೆ ಸುನಿಲ್ ಕನಗೊಳು ತಂಡ ಕೆಲಸ ಮಾಡಿದೆ ಎನ್ನುವುದು ತಿಳಿದುಬಂದಿದೆ.

ಸುನಿಲ್ ಕನಗೋಳು ಹಿಂದೆಯೇ ಹೂ ಮುಡಿದು ಸಂದೇಶರವಾನೆ ಮಾಡಿದರೆ ಸಾರ್ವಜನಿಕವಾಗಿ ಚರ್ಚೆಯಾಗಲಿದೆ ಎಂದಿದ್ದರು. ಇವರನ್ನು ಕಾಂಗ್ರೆಸ್ ಪರವಾಗಿ ರಣತಂತ್ರ ರೂಪಿಸಲು ಎಐಸಿಸಿಯಿಂದ ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net