

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಂದಿನ ಎರಡು ಪಂದ್ಯಗಳಲ್ಲಿ(Test) ಆಕ್ರಮಣಕಾರಿ ಬ್ಯಾಟ್ ಬೀಸದಂತೆ ವಿಕೇಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ಗೆ ಮಾಜಿ ಆಟಗಾರ ಸುನಿಲ್ ಗವಾಸ್ಕರ್(Sunil Gavaskar) ಸಲಹೆ ನೀಡಿದ್ದಾರೆ.
ಹೌದು, 2021ರಲ್ಲಿ ಗಬ್ಬಾದಲ್ಲಿ ನಡೆದ ಟೆಸ್ಟ್ನ್ನು ವಿನ್ನಿಂಗ್ ಮಾಡುವ ಮೂಲಕ ಅದ್ಭುತ ಪ್ರದರ್ಶನ ನೀಡಿದ ರಿಷಭ್ ಪಂತ್, ಇದೀಗ ನಡೆಯುತ್ತಿರುವ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡದೆ ಉತ್ತಮ ಬ್ಯಾಟ್ ಮಾಡಲು ಹೆಣಗಾಡುತ್ತಿದ್ದಾರೆ.
27ವರ್ಷದ ರಿಶಬ್, ಪ್ರಸ್ತುತ ನಡೆಯುತ್ತಿರುವ ಮೂರು ಟೆಸ್ಟ್ನ ಐದು ಇನ್ನಿಂಗ್ಸ್ನಲ್ಲಿ ಕ್ರಮವಾಗಿ 37, 1, 21, 28 ಮತ್ತು 9 ರನ್ಗಳನ್ನು ಪೆರಿಸಲು ಶಕ್ತರಾಗಿದ್ದಾರೆ. ಆಕ್ರಮಣಕಾರಿ ಬ್ಯಾಟ್ಗೆ ಹೆಸರುವಾಸಿಯಾದ ಪಂತ್, ಪಂದ್ಯದ ಪರಿಸ್ಥಿತಿಯನ್ನು ಲೆಕ್ಕಿಸದೇ ಆಕ್ರಮಣಕಾರಿ ಹೊಡೆತಗಳಿಗೆ ಮುಂದಾಗುತ್ತಾರೆ ಎಂದು ಸುನಿಲ್ ಗವಸ್ಕಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಟಾರ್ಸ್ಪೋರ್ಟ್ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್ ಗವಾಸ್ಕರ್, ''ರಿಷಭ್ ಪಂತ್ಗೆ ಸುದೀರ್ಘಕಾಲ ಕ್ರಿಸ್ನಲ್ಲಿಯೇ ಉಳಿಯಬೇಕು ಎಂದರೆ ಅವರು, ಮೊದಲು ಅರ್ಧಗಂಟೆ ನಿಧಾನವಾಗಿ ಬ್ಯಾಟ್ ಬೀಸಬೇಕು. ಬಳಿಕ ಕ್ರಿಸ್ಗೆ ಬೇರೆ ಆಟಗಾರರು ಬಂದರೆ ಅವರು ಹೆಚ್ಚು ಕಾಲ ಕ್ರಿಸ್ನಲ್ಲಿ ಉಳಿಯುವಂತೆ ಮಾಡಬೇಕು. ಆಕ್ರಮಕಾರಿ ಬ್ಯಾಟ್ ಬೀಸಲು ಮುಂದಾಗಬಾರದು. ಎಂತಹ ಪರಿಸ್ಥಿತಿ ಬಂದರೂ ಕ್ರಿಸ್ನಲ್ಲಿ ಗಟ್ಟಿಯಾಗಿ ನಿಲ್ಲುವುದು ಕಲಿಯ ಬೇಕು'' ಎಂದು ಹೇಳಿದ್ದಾರೆ.
ಪಂತ್ಗೆ ಸಲಹೆ ನೀಡಿದ ಹೇಡನ್
ಅಸ್ಟ್ರೇಲಿಯಾದ ದಂತಕತೆ ಹೇಡನ್ ರಿಷಭ್ ಪಂತ್ ಬಗ್ಗೆ ಮಾತನಾಡಿದ್ದು, ''ರಿಷಭ್ ಒಳ್ಳೆಯ ಆಟಗಾರ, ನಾನು ಯಾವಾಗಲೀ ಅವರ ಅಭಿಮಾನಿ, ಅವರು ವಿಭಿನ್ನವಾಗಿ ಬ್ಯಾಟ್ ಬೀಸುತ್ತಾರೆ ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಅವರು ಒತ್ತಡ ಪರಿಸ್ಥಿತಿಗಳಲ್ಲಿ ನಿರ್ಭೀತಿಯಿಂದಾಡುವ ವಿಧಾನಗಳನ್ನು ಆಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ,(ಏಜೆನ್ಸೀಸ್).