

ಬೆಂಗಳೂರು: ಕನ್ನಡಿಗ ಕೆಎಲ್ ರಾಹುಲ್ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಬೆನ್ನಲ್ಲೇ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರತಿಷ್ಠಿತ ಲಾರ್ಡ್ಸ್ನಲ್ಲಿ ಈ ಸಾಧನೆ ಮಾಡಿದ ಭಾರತದ 10ನೇ ಹಾಗೂ ಕರ್ನಾಟಕದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯ ಏನೆಂದರೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ರಾಹುಲ್ ಅವರನ್ನು ಅಭಿನಂದಿಸಿದ್ದು, ನನ್ನ ಹುಟ್ಟಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದೀರಿ ಎಂದು ಹೇಳಿದ್ದಾರೆ. ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜತೆ ರಾಹುಲ್ ಡೇಟಿಂಗ್ ಮಾಡುತ್ತಿದ್ದಾರೆ. ಸುನೀಲ್ ಶೆಟ್ಟಿ ಟ್ವೀಟ್ನಿಂದ ರಾಹುಲ್-ಆಥಿಯಾ ಪ್ರೀತಿಗೆ ಮತ್ತಷ್ಟು ಬಲಬಂದಿದೆ.