ಲೀಲಾ ದಾಮೋದರಗೆ ಆಮಂತ್ರಣ

New Project (13)
Published on

ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಲೀಲಾ ದಾಮೋದರ ಅವರಿಗೆ ಆಹ್ವಾನ ಹಾಗೂ ಫಲ ತಾಂಬೂಲ ನೀಡಿ ಗೌರವಿಸಿ ಆಮಂತ್ರಿಸಲಾಯಿತು.

ಸಂಘಟನಾ ಸಮಿತಿ ಅಧ್ಯಕ್ಷ ಕೇಶವ ಅಡ್ತಲೆ, ಸಂತೋಷ ಕುತ್ತಮೊಟ್ಟೆ, ಪೂರ್ವ ಸಮ್ಮೇಳನಾಧ್ಯಕ್ಷ ಕೆ.ಆರ್.ಗಂಗಾಧರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಕನ್ನಡ ಶಾಲು, ಫಲ ತಾಂಬೂಲ, ಆಮಂತ್ರಣ ನೀಡಿ ಅಧಿಕೃತವಾಗಿ ಆಹ್ವಾನಿಸಿದರು.

ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಳ್ಳತ್ತಡ್ಕ, ಕೋಶಾಧಿಕಾರಿ ದಯಾನಂದ ಆಳ್ವ, ಗಣೇಶ ಭಟ್ ಸಿಎ, ಕುಮಾರ ಸ್ವಾಮಿ ತೆಕ್ಕುಂಜ, ಲತಾ ಸುಪ್ರೀತ್ ಮೋಂಟಡ್ಕ, ಡಾ.ಎಸ್.ರಂಗಯ್ಯ, ಅಬ್ದುಲ್ಲಾ ಅರಂತೋಡು, ಹೇಮಾವತಿ ಕೊಯಿಂಗೊಡಿ, ದಾಮೋದರ ಕುಂದಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net