ಸುಳ್ಯ: ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಸುಳ್ಯದ ಐಬಿಗೆ ಭೇಟಿ ನೀಡಿ ನಗರ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸಮಾಲೋಚನೆ ಸಭೆ ನಡೆಸಿದ್ದು ತಾಲೂಕಿನ ಕೆಲವು ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಸದಸ್ಯರ ಮನವಿ ಆಲಿಸಿದ ಎ.ಸಿ, ಸುಳ್ಯವನ್ನು ಪ್ರವಾಸಿ ತಾಣವಾಗಿ ಮಾಡುವ ವಿವಿಧ ಯೋಜನೆಗಳ ಮಾಹಿತಿ ನೀಡಿದರು.
ಖಾಸಗಿ ಹಾಗೂ ಇತರ ಸಂಘ–ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುಳ್ಯದಲ್ಲಿ ವಾಟರ್ ಪಾರ್ಕ್, ಬೋಟಿಂಗ್, ಉದ್ಯಾನವನ, ಪ್ಲಾಸ್ಟಿಕ್ ಪಾರ್ಕ್, ಮುಂತಾದ ಪ್ರವಾಸಿ ತಾಣಗಳ ನಿರ್ಮಾಣ ಮಾಡಿ ಸುಳ್ಯಕ್ಕೆ ಆದಾಯ ಬರುವ ರೀತಿ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಜಾಗ ಗುರುತಿಸುವ ಬಗ್ಗೆ ಸಲಹೆ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಳ್ಯ ತಾಲೂಕು ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ, ತಾಲೂಕು ಕಚೇರಿಯ ನಾರಾಯಣ, ನಪಂ ಮುಖ್ಯ ಅಧಿಕಾರಿ ಸುಧಾಕರ್ ಉಪಸ್ಥಿತರಿದ್ದರು. ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನಪಂ ಸದಸ್ಯರಾದ ವಿನಯ್ ಕುಮಾರ್ ಕಂದಡ್ಕ, ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ಶೀಲಾ ಕುರುಂಜಿ, ಶಿಲ್ಪಾ ಸುದೇವ್, ಸುಧಾಕರ್ ಕುರುಂಜಿ ಭಾಗ್, ಧೀರಾ ಕ್ರಾಸ್ತಾ ಮೊದಲಾದವರು ಭಾಗವಹಿಸಿದ್ದರು.
ಶಿಸ್ತು, ಶ್ರಮ, ಗುರಿಯಿಂದ ಯಶಸ್ಸು – ಶಾಸಕ ಅಶೋಕ್ ರೈ ಅನಿಸಿಕೆ – ತಾಲೂಕುಮಟ್ಟದ ಪ್ರತಿಭಾ ಕಾರಂಜಿ
ನಾಗೇಶ್ ಬಪ್ಪನಾಡು ನಾದಸ್ವರದಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದವರು ಅಭಿನಂದನಾ ಕಾರ್ಯಕ್ರಮದಲ್ಲಿ ಕಲ್ಕೂರ ಶ್ಲಾಘನೆ