

ಸುಳ್ಯ: ತಾಲೂಕು ಕೃಷಿಕ ಸಮಾಜದ ತ್ರೈಮಾಸಿಕ ಸಭೆ ಅಧ್ಯಕ್ಷ ಎ.ಟಿ.ಕುಸುಮಾಧರ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆ ಸಭಾಭವನದಲ್ಲಿ ನಡೆಯಿತು.
ಭತ್ತ ಕೃಷಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳು, ಬಿತ್ತನೆ ಬೀಜ, ಕ್ರಿಮಿನಾಶಕಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ಭತ್ತದ ಕೃಷಿಯನ್ನು ವಿಸ್ತರಿಸಲು ಹೆಚ್ಚು ಪ್ರೋತ್ಸಾಹ ನೀಡಲು ನಿರ್ಧರಿಸಲಾಯಿತು. ಈ ವೇಳೆ ಕೃಷಿಕ ಸಮಾಜಕ್ಕೆ ನಿವೇಶನ ಒದಗಿಸಲು ಎಪಿಯಂಸಿ ಮತ್ತು ತಹಸೀಲ್ದಾರ್‌ಗೆ ಮನವಿ ನೀಡಲು ನಿರ್ಧರಿಸಲಾಯಿತು.
ತೋಟಗಾರಿಕಾ ಇಲಾಖೆ, ಪಶುಸಂಗೋಪನೆ ಇಲಾಖೆ, ಎಪಿಎಂಸಿ ಅಧಿಕಾರಿಗಳು ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿಕ ಸಮಾಜ ಅಧ್ಯಕ್ಷ ಕುಸುಮಾಧರ ಎ.ಟಿ., ನಿರ್ದೇಶಕರಾದ ಚಂದ್ರಾ ಕೊಲ್ಚಾರ್, ಅಣ್ಣಾಜಿ ಗೌಡ, ಕುಮಾರಸ್ವಾಮಿ, ರುಕ್ಮಯ್ಯ ಗೌಡ, ಮನ್ಮಥ ಎ.ಎಸ್., ಸವಿನ್ ಕೊಡಪಾಲ, ಉಮಾನಾಥ ಪಟೇಲ್ ಮನೆ, ಸುಧಾಕರ ಪ್ರಭು ಚರ್ಚೆಯಲ್ಲಿ ಭಾಗವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಸ್ವಾಗತಿಸಿದರು.