ಉತ್ತಮ ಸಂಗ್ರಹಕ್ಕೆ ‘ಸುಲ್ತಾನ್‘ ಹೆಸರುವಾಸಿ - ವಿಶ್ವ ವಜ್ರ ಡೈಮಂಡ್ ಪ್ರದರ್ಶನಕ್ಕೆ ಚಾಲನೆ ನೀಡಿ ನಟಿ ಧನ್ಯಾ ಪೂಜಾರಿ ಬಣ್ಣನೆ

PTR_20 AUG_7
Published on

ಪುತ್ತೂರು: ಆಭರಣಗಳ ಉತ್ತಮ ಸಂಗ್ರಹವನ್ನು ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಹೊಂದಿದೆ. ಡೈಮಂಡ್ ಸಂಗ್ರಹ ಮೈನವಿರೇಳಿಸುವಂತೆ ಮಾಡುತ್ತದೆ ಎಂದು ತುಳು ಚಿತ್ರ ನಟಿ ಧನ್ಯಾ ಪೂಜಾರಿ ಹೇಳಿದರು.

ಪುತ್ತೂರು ಏಳ್ಮುಡಿಯ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಶೋರೂಂನಲ್ಲಿ ದಕ್ಷಿಣ ಭಾರತದ ಪ್ರೀಮಿಯರ್ ವ್ರಜಾಭರಣ ಪ್ರದರ್ಶನ ವಿಶ್ವ ವಜ್ರ ಡೈಮಂಡ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಹೆಲ್ತ್ ಆಂಡ್ ಸ್ಯಾನಿಟರಿ ಇನ್‌ಸ್ಪ್ಪೆಕ್ಟರ್ ಆಯಿಶಾ ಪೆರ್ನೆ ಮಾತನಾಡಿ, ಹೊಸ ಹೊಸ ಆಭರಣಗಳನ್ನು ಸುಲ್ತಾನ್ ಪರಿಚಯಿಸುತ್ತಿದೆ. ನಿತ್ಯ ಬಳಕೆಯ ಸಂಗ್ರಹವನ್ನು ಗ್ರಾಹಕರಿಗೆ ನೀಡುತ್ತಿದೆ. ಮೊದಲು ಸುಲ್ತಾನ್‌ಗಾಗಿ ಮಂಗಳೂರಿಗೆ ಹೋಗಬೇಕಾಗಿದ್ದು, ಈಗ ಮುತ್ತಿನ ನಗರಿ ಪುತ್ತೂರಿನಲ್ಲಿರುವುದು ಸಂತಸದ ವಿಚಾರ ಎಂದರು.

ಮುಸ್ಲಿಂ ಸಂಯುಕ್ತ ಜನರಲ್ ಸೆಕ್ರೆಟರಿ ಎಲ್.ಟಿ.ರಜಾಕ್, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾರಾ ಪರ್ಲಡ್ಕ, ದಿವ್ಯಾ ಸಂತೋಷ್ ರೈ, ಲಸ್ರಾದೋ ಮೆಟಲ್ ಮಾರ್ಟ್‌ನ ಜಸಿಂತಾ ಫೆರ್ನಾಂಡಿಸ್, ಬ್ರ್ಯಾಂಚ್ ಮ್ಯಾನೇಜರ್ ಬಾಬು, ಮ್ಯಾನೇಜರ್ ರಹಾವತ್, ಮಾರ್ಕೆಟಿಂಗ್ ಮ್ಯಾನೇಜರ್ ಹಮ್ರಾಝ್, ಮ್ಯಾನೇಜರ್ ಸಾಧಿಕ್ ಉಪಸ್ಥಿತರಿದ್ದರು. ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು.

ವಜ್ರ ಆಭರಣದ ಸಂಗ್ರಹ!

ವಿಶ್ವ ವಜ್ರ ಕಾರ್ಯಕ್ರಮದಲ್ಲಿ ಯು.ಎಸ್., ಬೆಲ್ಜಿಯಂ, ಟ್ರೆಡಿಷನಲ್, ಟರ್ಕಿ, ಮಿಡಲ್ ಈಸ್ಟ್, ಪ್ರೆಂಚ್, ಇಟಲಿ, -ನ್ಸ್, ಸಿಂಗಾಪುರ ದ ಪ್ರಮಾಣೀಕೃತ ವಜ್ರದ ಆಭರಣ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತಿದೆ. ಸೆ.೫ರವರೆಗೆ ಡೈಮಂಡ್ ಕ್ಯಾರೆಂಟ್‌ಗೆ ಪ್ಲಾಟ್ ೮ ಸಾವಿರ ರೂ. ರಿಯಾಯಿತಿ ಪಡೆಯಬಹುದು.

ವಿವಿಧ ವಿನ್ಯಾಸ

ಸಾಲಿಟೇರ್ ಕಲೆಕ್ಷನ್, ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ಸಂಗ್ರಹ, ತನ್ಮಾನಿಯಾ ಸಂಗ್ರಹಗಳು, ವಧುವಿನ ವಜ್ರ ಆಭರಣ ಸಂಗ್ರಹಗಳು, ಕತ್ತರಿಸದ ವಜ್ರಗಳು, ರೂಬಿ ಎಮರಾಲ್ಡ್ ರತ್ನದ ಸಂಗ್ರಹಗಳಿದೆ. ಕೈಗೆಟಕುವ ದೈನಂದಿನ ಉಡುಗೆ ವಜ್ರದ ಸಂಗ್ರಹ ಹೊಂದಿದೆ. ಲೈಟ್ ವೇಟ್ ಡೈಮಂಡ್ ನೆಕ್ಲೇಸ್‌ಗಳು, ಲೈಟ್ ವೇಟ್ ಡೈಮಂಡ್ ಬ್ಯಾಂಗಲ್, ಡೈಮಂಡ್ ರಿಂಗ್‌ಗಳು ಸಂಗ್ರಹಗಳಲ್ಲಿ ಲಭ್ಯವಿದೆ.

ಗ್ರಾಹಕರ ಮನಸೂರೆ!

ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಮೂರು ದಶಕಗಳಿಂದ ವಿವಿಧ ಕಡೆ ಸೇವೆ ನೀಡುತ್ತಿದ್ದು, ಪುತ್ತೂರಿನಲ್ಲಿ ಒಂದು ವರ್ಷದಿಂದ ವಿವಿಧ ವಿನ್ಯಾಸದ ಆಭರಣಗಳ ಮೂಲಕ ಗ್ರಾಹಕರ ಮನಸೂರೆ ಮಾಡಿದೆ. ವಿವಿಧ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net