

ಕಾಸರಗೋಡು: ನಗರದ ಕುಡ್ಲು ಮೀಪುಗುರಿ ನಿವಾಸಿ ಉದಯ ಎಂಬುವರ ಪುತ್ರಿ ಸಜಿನಾ(18) ಮೃತದೇಹ ಬಾಡಿಗೆ ಮನೆಯ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಂದೆ ಮತ್ತು ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭ ಕೃತ್ಯವೆಸಗಿದ್ದು, ತಾಯಿ ಕೆಲಸ ಬಿಟ್ಟು ಸಂಜೆ ಮನೆಗೆ ವಾಪಸಾದಾಗ ಮೃತದೇಹ ಪತ್ತೆಯಾಗಿದೆ. ಮನೆ ಮಾಲೀಕ ಲೋಕೇಶ್ ಎಂಬುವರ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.