More

    ದೀಪಾವಳಿಗೆ ಕೋಟಿಗೊಬ್ಬನ ಗಾನ ಬಜಾನ

    ಬೆಂಗಳೂರು: ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಲ್ಲಿರುವ ‘ಕಿಚ್ಚ’ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಇದೀಗ ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆ ನೀಡಲು ಪ್ಲಾ್ಯನ್ ಹಾಕಿಕೊಂಡಿದೆ. ಈಗಾಗಲೇ ಎಲ್ಲೆಡೆ ದೀಪಾವಳಿ ಸಂಭ್ರಮ ಶುರುವಾಗಿದೆ. ಆ ಸಂಭ್ರಮವನ್ನು ಡಬಲ್ ಮಾಡಬೇಕು ಎಂಬ ದೃಷ್ಟಿಯಿಂದ ‘ಕೋಟಿಗೊಬ್ಬ 3’ ಚಿತ್ರದ ‘ಪಟಾಕಿ ಪೋರಿಯೋ..’ ಸಾಹಿತ್ಯವುಳ್ಳ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ.

    ನ.15ರಂದು ಹಾಡಿನ ಲಿರಿಕಲ್ ವಿಡಿಯೋ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಲಿದ್ದು, ಈ ಹಾಡಿನಲ್ಲಿ ಸುದೀಪ್ ಜತೆಗೆ ಆಶಿಕಾ ರಂಗನಾಥ್ ನೃತ್ಯ ಮಾಡಿದ್ದಾರೆ. ಪಕ್ಕಾ ಟಪೋರಿ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಮತ್ತು ಅನುರಾಧಾ ಭಟ್ ಧ್ವನಿ ನೀಡಿದ್ದಾರೆ.

    ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಏಪ್ರಿಲ್​ನಲ್ಲಿ ಇದೇ ಚಿತ್ರದ ‘ಆಕಾಶಾನೇ ಅಧರಿಸುವ..’ ಹಾಡು ಹೊರಬಂದಿತ್ತು. ಅದಾದ ಬಳಿಕ ಚಿತ್ರದ ಬೇರಾವ ಅಪ್​ಡೇಟ್ ಮಾಹಿತಿ ನೀಡದ ತಂಡ, ಈಗ ಮತ್ತೊಂದು ಹಾಡಿನ ಮೂಲಕ ಆಗಮಿಸುತ್ತಿದೆ. ಕರೊನಾ ಇಲ್ಲದಿದ್ದರೆ ಜುಲೈ ಅಥವಾ ಆಗಸ್ಟ್​ನಲ್ಲಿ ಈ ಸಿನಿಮಾ ತೆರೆಕಂಡಿರುತ್ತಿತ್ತು. ಇದೀಗ ಜನವರಿಗೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಶಿವಕಾರ್ತಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts