

ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಪ್ರತಿದಿನ ಭಾರೀ ಏರಿಕೆ ಕಾಣುತ್ತಿದೆ. ಅದರ ಜತೆ ಆಕ್ಸಿಜನ್ ಸಮಸ್ಯೆಯೂ ಹೆಚ್ಚಾಗಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ.
ಕಿಚ್ಚ ಸುದೀಪ್ ಬೆಂಗಳೂರಿನ ಆಸ್ಪತ್ರೆಗಳಿಗೆ 300 ಆಕ್ಸಿಜನ್ ಸಿಲಿಂಡರ್ಗಳನ್ನು ಪೂರೈಕೆ ಮಾಡಲು ಮುಂದಾಗಿದ್ದಾರೆ. ಈ ಹಿಂದೆಯೂ ಸಹ ಅನೇಕ ಸಂಕಷ್ಟದ ಸಮಯದಲ್ಲಿ ಅವರು ಜನರ ಪರವಾಗಿ ನಿಂತಿದ್ದರು.
ಸುದೀಪ್ ಕೂಡ ಅನಾರೋಗ್ಯದಿಂದ ಬಳಲಿ ಇದೀಗ ಚೇತರಿಸಿಕೊಂಡಿದ್ದಾರೆ. ಅನಾರೋಗ್ಯದ ಕಾರಣದಿಂದಲೇ ಎರಡು ವಾರಗಳ ಬಿಗ್ಬಾಸ್ಗೆ ಅವರು ಹಾಜರಾಗಿರಲಿಲ್ಲ.