ಅಕ್ಕಿ-ಬೇಳೆ ಬಲು ತುಟ್ಟಿ! ಬೇಳೆ-ಕಾಳು ಬೆಲೆ ಏರಿಕೆಗೆ ಜನಸಾಮಾನ್ಯರು ಹೈರಾಣು

rice
Published on

ಬೆಂಗಳೂರು: ಇದೀಗ ರಾಜ್ಯದಲ್ಲಿ ಕಳೆದ ಹದಿನೈದು ದಿನಗಳಿಂದ ಬೇಳೆ ಕಾಳುಗಳ ಬೆಲೆ ದಿಢೀರನೆ ಏರಿಕೆಯಾಗಿದೆ. ಇದರಿಂದಾಗಿ ಜನಸಾಮಾನ್ಯರು ಹೈರಾಣಾಗಿರುವುದು ನಿಜ.

ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ದೇಶಾದ್ಯಂತ ಬೇಳೆಗಳ ಅಭಾವ ಉಂಟಾಗಿರುವುದು. ಇನ್ನು ಥಾಯ್ಲೆಂಡ್‌, ಇಂಡೋನೇಷ್ಯಾದಿಂದ ಬೇಳೆಕಾಳುಗಳ ಆಮದು ಶೇ. 30ರಷ್ಟುಕಡಿಮೆಯಾಗಿದೆ. ರಾಜ್ಯಕ್ಕೆ ಮಧ್ಯಪ್ರದೇಶದಿಂದ ಬರುತ್ತಿದ್ದ ತೊಗರಿಬೇಳೆ ಆಮದು ಕೂಡ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಬೇಳೆಕಾಳು ಬರುತ್ತಿದ್ದು ದರ ಏರಿದೆ. ಈ ಮಾಹಿತಿಯನ್ನು ದಿಗ್ವಿಜಯ ನ್ಯೂಸ್ ನೀಡಿದೆ.

ಅಕ್ಕಿ 20 ರೂ.ವರೆಗೂ ದುಬಾರಿ ಬೆಲೆ ಏರಿಕೆ ವಿವರ! (ಪ್ರತಿ ಕೆ.ಜಿ.ಗೆ)

• RNR ಸ್ಟೀಮ್‌ -  ₹ 50

• ರಾ ರೈಸ್‌ - ₹ 55

• ಸೋನಾ ಮಸೂರಿ ಸ್ಟೀಮ್‌ - ₹ 55-56

• ರಾ ರೈಸ್‌ . ₹ 55-58

• ಬುಲೆಟ್‌ ರೈಸ್‌ -  ₹ 72-73

ಬೇಳೆ ಕಾಳು ಬೆಲೆ 3 ತಿಂಗಳ ಹಿಂದೆಷ್ಟು, ಈಗೆಷ್ಟು?

  • ತೊಗರಿಬೇಳೆ - 110 (ಹಿಂದೆ)- 160 ರೂ (ಈಗ).
  •  ಉದ್ದಿನಬೇಳೆ – 110 (ಹಿಂದೆ)- 135 ರೂ. (ಈಗ)
  •  ಮಸೂರ್‌ ದಾಲ್‌ - 84 (ಹಿಂದೆ)- 110 ರೂ. (ಈಗ)”
  •  ಹೆಸರುಬೇಳೆ - 120 (ಹಿಂದೆ)- 140 ರೂ. (ಈಗ)
  •  ಅಲಸಂದೆ - 85 (ಹಿಂದೆ)- 100 ರೂ. (ಈಗ)
  •  ಅರಿಶಿನ -126 (ಹಿಂದೆ)- 180 ರೂ. (ಈಗ)
  •  ಜೀರಿಗೆ - 350 (ಹಿಂದೆ)- 600 ರೂ. (ಈಗ)
  •  ಮೆಣಸಿನಪುಡಿ - 186 (ಹಿಂದೆ)- 400 ರೂ. (ಈಗ)
  •  ದನಿಯಾ ಪೌಡರ್‌ - 150 (ಹಿಂದೆ)- 218 ರೂ‌. (ಈಗ)
  •  ಕಾಳುಮೆಣಸಿನ ಪುಡಿ - 380 (ಹಿಂದೆ)- 520 ರೂ. (ಈಗ)
  •  ಬ್ಯಾಡಗಿ ಮೆಣಸು - 330 (ಹಿಂದೆ) - 850 ರೂ. (ಈಗ)

(ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net