ಇಂದಿನಿಂದ ಈ ರಾಶಿಯವರಿಗೆ ಯಶಸ್ಸಿನ ಅಬ್ಬರ! ನಿಮ್ದೂ ಇದೇ ರಾಶಿನಾ? Astrology

astrology
Published on

Astrology: ನವೆಂಬರ್​ ತಿಂಗಳಿನಲ್ಲಿ ವಿಶೇಷ ಗ್ರಹಗಳ ಸಂಯೋಗ ನಡೆಯುತ್ತಿದ್ದು, ಶನಿ ಮತ್ತು ಶುಕ್ರ ಶರಾಷ್ಟಕ ದೃಷ್ಟಿ ಯೋಗವನ್ನು ರೂಪಿಸುತ್ತದೆ. ಇದನ್ನು ಜೀವನದ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ಎಂದು ಗುರುತಿಸಲಾಗುತ್ತದೆ. ಇದು ಜೀವನದಲ್ಲಿ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ. ಹಾಗಿದ್ದರೆ ಯಾವ ಯಾವ ರಾಶಿ ಚಕ್ರದವರಿಗೆ ಲಾಭ ಇದೆ ಎಂದು ನೋಡೋಣ ಬನ್ನಿ..

* ವೃಷಭ ರಾಶಿ

ವೃಷಭ ರಾಶಿಯ ಜನರು ಶುಕ್ರನ ಪ್ರಭಾವಕ್ಕೊಳಗಾಗಿರುವುದರಿಂದ, ಈ ಸಂಪರ್ಕವು ಅವರಿಗೆ ತುಂಬಾ ಫಲಪ್ರದವಾಗಿರುತ್ತದೆ. ಆದರಿಂದ ಇವರು ಮಾಡುವಂತಹ ಕೆಲಸಗಳಲ್ಲಿ ಯಶಸ್ಸನ್ನು ಸಿಗುತ್ತವೆ. ಮತ್ತು ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ವಿವಾಹ ಆಗಲು ಬಯಸುತ್ತಿರುವವರಿಗೆ ಒಳ್ಳೆಯ ಸುದ್ಧಿ ಬರಲಿದೆ. ಹಾಗೆಯೇ ಈ ಸಮಯದಲ್ಲಿ ಹೂಡಿಕೆಗಳಲ್ಲಿ ಲಾಭ ಪಡೆಯಬಹುದುದಾಗಿದೆ.

* ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ತಿಂಗಳು ಪ್ರಗತಿಯ ಸಮಯವಾಗಿರುತ್ತದೆ. ಶನಿ ಮತ್ತು ಶುಕ್ರನ ಅದೃಷ್ಟ ಸಂಯೋಗದಿಂದ ಪಡೆದ ಶಿಸ್ತು ನಿಮ್ಮನ್ನು ಉನ್ನತಕ್ಕೆ ಕರೆದುಕೊಂಡು ಹೋಗಬಹುದು. ದೀರ್ಘಕಾಲದಿಂದ ಅರ್ಧದಲ್ಲೇ ನಿಂತ ಕೆಲಸಗಳು ಈಗ ಪೂರ್ಣಗೊಳ್ಳುತ್ತವೆ. ವೃತ್ತಿ ಜೀವನದಲ್ಲಿ ಸ್ಥಿರತೆ ಉಂಟಾಗುತ್ತದೆ.

* ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಶನಿ ಮತ್ತು ಶುಕ್ರನ ಅದೃಷ್ಟದಿಂದ ಆರ್ಥಿಕ ಲಾಭ ಮತ್ತು ಕುಟುಂಬ ಸಂತೋಷ ಸಿಗುವ ಸಾಧ್ಯತೆಯಿದೆ. ಹಳೆಯ ವಿವಾದಗಳು ಬಗೆಹರಿಯುವಂತಹ ಸಮಯ ಇದಾಗಿದೆ. ಆಸ್ತಿಗೆ ಸಂಬಂಧಿಸಿದ ಗಮನಾರ್ಹ ಲಾಭಗಳು ಉಂಟಾಗಬಹುದು. ಉದ್ಯಮಿಗಳಿಗೆ ಈ ಸಮಯ ಹೊಸ ಅವಕಾಶಗಳನ್ನು ತರುವಂತದ್ದಾಗಿದೆ.

* ಮಕರ ರಾಶಿ

ಮಕರ ರಾಶಿಯವರು ಶನಿಯ ಪ್ರಭಾವಕ್ಕೊಳಗಾಗಿರುವುದರಿಂದ ಈ ಗ್ರಹಗಳ ಸಂಚಾರವು ವಿಶೇಷ ಅನುಕೂಲವನ್ನು ನೀಡುತ್ತದೆ. ಈ ಅವಧಿಯಲ್ಲಿ ಉದ್ಯೋಗದಾತರು ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಉದ್ಯೋಗದಲ್ಲಿರುವವರಿಗೆ ಸಂಬಳ ಹೆಚ್ಚಾಗುವ ನಿರೀಕ್ಷೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.

* ಮೀನ ರಾಶಿ

ಮೀನ ರಾಶಿಯವರರಲ್ಲಿ ಶನಿ ಮತ್ತು ಶುಕ್ರನ ಗ್ರಹಗಳು ಸಂಚಾರವಾಗುವುರಿಂದ ವಿದೇಶಾಂಗ ವ್ಯವಹಾರಗಳಲ್ಲಿ ಯಶಸ್ಸಿನ ಸಾಧ್ಯತೆ ಇದೆ. ಇದು ಕಳೆದುಹೋದ ಹಣವನ್ನು ಮತ್ತೆ ಪಡೆಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಇದು ಅಧ್ಯಯನದಲ್ಲಿ ಹೆಚ್ಚಿನ ಗಮನ ಕೊಡಲು ಸಹಕಾರವಾಗಿದೆ. ಪ್ರೀತಿ ಪ್ರೇಮ ಸಂಬಂಧಗಳು ಸಿಹಿಯಾಗಿರುತ್ತವೆ. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net