ಅಭಯ ಮಹಾಗಣಪನಿಗೆ ಪಂಚಾಮೃತಾಭಿಷೇಕ : ಶ್ರೀಮಠದಲ್ಲಿ ಬಣ್ಣರಹಿತ ಮೃಣ್ಮಯ ಮಡಿ ಗಣೇಶ

18-ganesha
Published on

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತದ ಅಭಯ ಮಹಾಗಣಪತಿ ದೇವಳದಲ್ಲಿ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥರ ದಿವ್ಯ ಉಪಸ್ಥಿತಿಯಲ್ಲಿ, ಶ್ರೀ ಮಠದ ಆಡಳಿತದಲ್ಲಿರುವ ವಿಶಿಷ್ಟ 21 ಅಡಿ ಎತ್ತರದ ಏಕಶಿಲಾ ಆಭಯ ಮಹಾಗಣಪತಿ ಸನ್ನಿಧಿಯಲ್ಲಿ ಹಾಲಿನ ಅಭಿಷೇಕ ಸಮರ್ಪಿಸಲಾಯಿತು. ವಿಶೇಷ ಪಂಚಾಮೃತ ಮಹಾಭಿಷೇಕ ನೆರವೇರಿತು. ಹೂವಿನ ಅಲಂಕಾರ ಸೇವೆ, ರಜತ ಮುಕುಟ ಧಾರಣೆ, ಮಹಾಪೂಜೆ ನಡೆಯಿತು. ಶ್ರೀ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಅಪ್ಪಕಜ್ಜಾಯ ಸೇವೆ ನೆರವೇರಿಸಲಾಯಿತು.

ಶ್ರೀ ಮಠ: ಶ್ರೀ ಮಠದಲ್ಲಿ ಶ್ರೀವಿದ್ಯಾಪ್ರಸನ್ನ ತೀರ್ಥರ ಉಪಸ್ಥಿತಿಯಲ್ಲಿ ಮಹಾಗಣಪತಿ ವಿಗ್ರಹ ಪ್ರತಿಷ್ಠಾಪನೆ ಪೂಜೆ ನೆರವೇರಿತು. ಶ್ಯಾಮ ವರ್ಣ ಗಣಪತಿಗೆ ವಿವಿಧ ವೈದಿಕ ವಿಧಿ-ವಿಧಾನಗಳೊಂದಿಗೆ ಪೂಜೆ ನಡೆಯಿತು. 21 ಕಾಯಿ ಗಣಪತಿ ಹೋಮ ನೆರವೇರಿತು. ಶ್ರೀಮಠದಲ್ಲಿ ಯಾವುದೇ ಬಣ್ಣವಿಲ್ಲದೆ ಮೃಣ್ಮಯ ಬಣ್ಣದ ಮಡಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net