ಸಿಐಟಿಯುನ ಜಿಲ್ಲಾಧ್ಯಕ್ಷರಾಗಿ ಸುಭಾಷ್ ನಾಯಕ್ ಆಯ್ಕೆ

bmr
Published on

ಬ್ರಹ್ಮಾವರ: ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ವಾಣ ಕಾರ್ಮಿಕರ ಸಂ ಸಿಐಟಿಯು ಇದರ ಜಿಲ್ಲಾ ಅಧ್ಯಕ್ಷರಾಗಿ ಸುಭಾಷ್ ನಾಯಕ್ ಆಯ್ಕೆಯಾಗಿದ್ದಾರೆ. ಬ್ರಹ್ಮಾವರದ ಆಶ್ರಯ ಹೋಟೆಲ್‌ನಲ್ಲಿ ನಡೆದ 20ನೇ ವಾರ್ಷಿಕ ಮಹಾ ಸಭೆಯಲ್ಲಿ ಸಿಡಬ್ಲೂಎಫ್‌ಐ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರ ಸಮ್ಮುಖದಲ್ಲಿ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ, ದಯಾನಂದ ಕೋಟ್ಯಾನ್, ರಾಮ ಸಾಲ್ಯಾನ್, ಉದಯ ಪೂಜಾರಿ, ಚಂದ್ರಯ್ಯ ಆಚಾರ್ಯ, ಗಣೇಶ್ ನಾಯಕ್, ಚಂದ್ರನಾಯ್ಕ, ರತ್ನಾಕರ ಪೂಜಾರಿ, ಕಾರ್ಯದರ್ಶಿಯಾಗಿ ಶಶಿಧರ ಗೊಲ್ಲ, ಖಜಾಂಚಿಯಾಗಿ ವಾಮನ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ರಾಮ ಕಾರ್ಕಡ, ಸರೋಜಾ, ಶೇಖರ ಆಚಾರ್ಯ, ಸೈಯದ್ ಆಲಿ, ರಮೇಶ್ ವಿ.ಶಾರದಾ ಗುಂಡ್ಮಿ, ರಮೇಶ್ ಆಚಾರ್ಯ, ಸಂಜೀವ ನಾಯ್ಕ ಮತ್ತು ವಿಶೇಷ ಆಹ್ವಾನಿತರಾಗಿ ನಾಗೇಶ್ ಆಚಾರ್ಯ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net