VIDEO VIRAL | ಗನ್​ ಲೋಡ್​ ಮಾಡಲು ಬಾರದ ಸಬ್​ ಇನ್ಸ್ಪೆಕ್ಟರ್​; ಅಚಾನಕ್​ ಇನ್ಸ್ಪೆಕ್ಷನ್​ಗೆ ಬಂದಿದ್ದ ಅಧಿಕಾರಿಗಳೂ ಶಾಕ್​..!

police
Published on: 

ಉತ್ತರಪ್ರದೇಶ: ಇಲ್ಲೊಬ್ಬ ಪೊಲೀಸ್​ ಅಧಿಕಾರಿ, ರೈಫಲ್​ ಒಳಗೆ ಗುಂಡು ಲೋಡ್​ ಮಾಡಲುಲ ವಿಫಲವಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ವಿಷಯ ಬಹಿರಂಗವಾಗಿದ್ದು ಪೊಲೀಸ್​ ಅಧಿಕಾರಿಗಳು ಅಚಾನಕ್​ ಆಗಿ ತನಿಖೆಗೆ ಬಂದಿದ್ದರಿಂದ. ಇಲ್ಲವಾದಲ್ಲಿ ಈ ವಿಷಯ ಇನ್ನೆಷ್ಟು ವರ್ಷಗಳ ಕಾಲ ನಿಗೂಢವಾಗಿಯೇ ಉಳಿಯುತ್ತಿತ್ತೋ ಏನೋ!

ಖಲೀಲಾಬಾದ್ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿ), ಬಸ್ತಿ ಶ್ರೇಣಿ, ಆರ್‌ಕೆ ಭಾರದ್ವಾಜ್, ಹಠಾತ್ ಆಗಿ ಬಂದಿದ್ದು ತಪಾಸಣೆಯ ಸಂದರ್ಭದಲ್ಲಿ ರೈಫಲ್ ಅನ್ನು ಲೋಡ್ ಮಾಡಲು ಸಬ್ ಇನ್‌ಸ್ಪೆಕ್ಟರ್‌ಗೆ ಕೇಳಿದ್ದಾರೆ. ಆಗ ಇವರು ಗನ್​ ತೆಗೆದುಕೊಂಡು ಗುಂಡನ್ನು ರೈಫಲ್​ನ ಮುಂಭಾಗದ ನಳಿಗೆಯಿಂದ ಲೋಡ್​ ಮಾಡಲು ಪ್ರಯತ್ನಿಸಿದ್ದಾರೆ.

ಕಡೆಗೆ ಈ ದುರವಸ್ಥೆಯನ್ನು ನೋಡಲಾಗದೇ ಐಜಿ, ಖುದ್ದಾಗಿ ರೈಫಲ್​ ಹೇಗೆ ಲೋಡ್​ ಮಾಡುವುದು ಎಂದು ಹೇಳಿಕೊಟ್ಟಿದ್ದಾರೆ.ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳಿಂದ ಯೋಗಿ ಸರರ್ಕಾರಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.