ಠಾಣೆಯಲ್ಲೇ ಸರ್ವಿಸ್​ ರಿವಲ್ವರ್​ನಿಂದ ಆತ್ಮಹತ್ಯೆ ಮಾಡಿಕೊಂಡ ಸಬ್​​ಇನ್​ಸ್ಪೆಕ್ಟರ್​​​​!: ಕಾರಣ ಹೀಗಿದೆ..| Revolver

dk (46) (1)
Published on

ಆಂಧ್ರಪ್ರದೇಶ: ಠಾಣೆಯಲ್ಲೇ ಸರ್ವಿಸ್​ ರಿವಲ್ವರ್​ನಿಂದ( Revolver) ಸಬ್​​ಇನ್​ಸ್ಪೆಕ್ಟರ್​​​​ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ತನಕು ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ನಡೆದಿದೆ.

ಸಬ್​​ಇನ್​ಸ್ಪೆಕ್ಟರ್ ಎ.ಜಿ.ಎಸ್. ಮೂರ್ತಿ ಮೃತ. ಇತ್ತೀಚಿಗೆ ಭ್ರಷ್ಟಚಾರದ ಆರೋಪ ಇತನ ಮೇಲೆ ಹೊರಿಸಲಾಗಿತ್ತು. ವಿರುದ್ಧ ವಿಚಾರಣೆ ಬಾಕಿ ಇತ್ತು. ಇದೇ ವಿಚಾರವಾಗಿ ಇಂದು ಮುಂಜಾನೆ ಠಾಣೆಗೆ ಬಂದಿದ್ದ ಠಾಣೆಯಲ್ಲಿಯೇ ಮೂರ್ತಿ ಆತ್ಮಹತ್ಯೆ ಮಾಡಿಕೊಂಡಿ​ದ್ದಾನೆ ಎಂದು ಶಂಕಿಸಲಾಗಿದೆ.

ಈ ಕುರಿತು ಮಾತನಾಡಿರುವ ಜಿಲ್ಲಾ ವರಿಷ್ಠಾಧಿಕಾರಿ(ಎಸ್​ಪಿ) ಅದ್ನಾನ್​ ಆಸ್ಮಿ, '' ಮುಂಜಾನೆ 7.45 ಸುಮಾರಿಗೆ ಘಟನೆ ನಡೆಸಿದೆ. ತನಿಖೆ ಬಳಿಕ ಆತ್ಮಹತ್ಯೆಯ ಕಾರಣ ತಿಳಿಯಲಿದೆ. ಪ್ರಾಥಮಿಕ ವರದಿ ಪ್ರಕಾರ ತನಿಖೆಗೆ ಬೇಸತ್ತು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ'' ಎಂದು ಹೇಳಿದ್ದಾರೆ.(ಎಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net