ದೇವರು, ರಾಕ್ಷಸರ ಕುರಿತ ಭಾರತೀಯರ ನಂಬಿಕೆಗಳ ಕುರಿತು ಅಧ್ಯಯನ ಅಗತ್ಯ : ಪ್ರೊ.ಕೆ.ಆರ್.ದುರ್ಗಾದಾಸ್

bayalata
Published on

ಮೈಸೂರು: ಉತ್ತರ ಭಾರತ ಮತ್ತು ದಕ್ಷಿಣ ಭಾರತೀಯರಲ್ಲಿ ರಾಕ್ಷಸರ ಕುರಿತು ಭಿನ್ನವಾದ ಅಭಿಪ್ರಾಯಗಳು ಇದೆ. ಅದೇ ರೀತಿ ದೇವರ ಹೆಸರಿ ನಲ್ಲಿಂುೂ ದಕ್ಷಿಣದ ದನಿ ಭಿನ್ನವಾಗಿದ್ದು, ಈ ಬಗ್ಗೆ ಅಧ್ಯಯನದ ಅವಶ್ಯಕತೆ ಇದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್ ಹೇಳಿದರು.

ಕರ್ನಾಟಕ ಬಂುಲಾಟ ಅಕಾಡೆಮಿ, ರಂಗಾಂುಣ ಮೈಸೂರು, ಮಹಾರಾಜ ಕಾಲೇಜು ಜಾನಪದ ವಿಭಾಗ ವತಿಯಿಂದ ನಗರದ ರಂಗಾಯಣದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಮೂಡಲಪಾಂು ಬಂುಲಾಟ ಪರಂಪರೆ ವಿಚಾರಸಂಕಿರಣ ಮತ್ತು ಪ್ರದರ್ಶನ ಕಾಂರ್ುಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರು ಹಾಗೂ ರಾಕ್ಷಕರ ಕುರಿತು ಅಧ್ಯಯನ ನಡೆಸಲು ಅಕಾಡೆಮಿಗೆ ಲೇಖಕರ ಅವಶ್ಯಕತೆ ಇದೆ. ದಕ್ಷಿಣ ಭಾರತೀಯರು ರಾವಣನನ್ನು ಸುಡುವುದಿಲ್ಲ, ಬದಲಾಗಿ ಪೂಜಿಸುತ್ತಾರೆ. ಇಂತಹ ಅಂಶಗಳ ಕುರಿತು ಅಧ್ಯಯನ ನಡೆಯುವ ಅವಶ್ಯಕತೆ ಇದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಂಗಾಂುಣ ನಿರ್ದೇಶಕ ಸತೀಶ್ ತಿಪಟೂರು, ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ, ಆಡಳಿತಾಧಿಕಾರಿ ಪ್ರೊ.ಕೆ.ತಿಮ್ಮಂ್ಯು, ಪ್ರಾಧ್ಯಾಪಕಿ ಪ್ರೊ.ವಿಜಂುಲಕ್ಷ್ಮೀ ಮನಾಪುರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net