ಮುಂಡಾಡಿ ವಿಶ್ವಜ್ಞಾನ ಶಾಲೆ ಪ್ರಾರಂಭೋತ್ಸವ : ಮೆರವಣಿಗೆ ಮೂಲಕ ವಿದ್ಯಾರ್ಥಿಗಳಿಗೆ ಸ್ವಾಗತ

kon
Published on

ಕೊಕ್ಕರ್ಣೆ: ಮುಂಡಾಡಿ ವಿಶ್ವಜ್ಞಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ ಶನಿವಾರ ನಡೆಯಿತು. ಸ್ಥಳೀಯ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಭಾರತೀಯ ಸೈನಿಕರ ಯೋಗಕ್ಷೇಮಕ್ಕಾಗಿ ಪೂಜೆ ನಡೆಸಲಾಯಿತು. ಬಳಿಕ ಶಾಲಾ ಮಕ್ಕಳನ್ನು ಮೆರವಣಿಗೆ ಮೂಲಕ ಬರವಾಡಿಕೊಳ್ಳಲಾಯಿತು. ಭಾರತ ಸೇನೆಯ ಎನ್‌ಎಸ್‌ಜಿ ಬ್ಲಾಕ್ ಕ್ಯಾಟ್ ಕವಾಂಡೋ ಪ್ರಶಾಂತ್ ಸೂರಾಲು ಮೆರವಣಿಗೆಗೆ ಚಾಲನೆ ನೀಡಿದರು.

ಆಡಳಿತ ಮಂಡಳಿ ಮುಖ್ಯಸ್ಥ ವಿಶ್ವನಾಥ ಶೆಟ್ಟಿ, ನಿವೃತ್ತ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಭುಜಂಗ ಶೆಟ್ಟಿ, ಪ್ರೋ.ಸಖಾರಾಮ ಸೋಮಯಾಜಿ, ಶಿಕ್ಷಕ ವೃಂದ, ಪಾಲಕರು, ಹಳೇ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಸುಧೀರ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net