ವಿದ್ಯಾರ್ಥಿಗಳು ದೇಶ ಸೇವೆಗೆ ಅಣಿಯಾಗಿ

hbr (1)
Published on

ಹೆಬ್ರಿ: ನನ್ನ ಸೇವಾ ಅವಧಿಯಲ್ಲಿ ಅನೇಕ ಕಠಿಣ ಸಂದರ್ಭಗಳನ್ನು ಎದುರಿಸಿದ್ದೇನೆ. ವಿದ್ಯಾರ್ಥಿಗಳು ತಾವು ಮುಂದೆ ದೇಶ ಸೇವೆಗೆ ಅಣಿಯಾಗಬೇಕು. ದುಷ್ಟ ವ್ಯಸನಗಳಿಗೆ ಬಲಿಯಾಗದಿರಿ ಎಂದು ನಿವೃತ್ತ ಯೋಧ ರಾಜು ಪೂಜಾರಿ ಹೇಳಿದರು.

ಹೆಬ್ರಿಯ ಅಮೃತ ಭಾರತಿ ವಿದ್ಯಾ ಕೇಂದ್ರದ ಅನ್ನಪೂರ್ಣ ಸಭಾಂಗಣದಲ್ಲಿ ಶನಿವಾರ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ‘ಕಾರ್ಗಿಲ್ ಕಡುಗಲಿಯರಿಗೆ ಕಂದಮ್ಮರ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾಸ್ಟೆಲ್ ಕಮಿಟಿಯ ಗೌರವಾಧ್ಯಕ್ಷ ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಮಹನೀಯರು ನಮಗೆಲ್ಲಾ ಆದರ್ಶಪ್ರಾಯರು. ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ರಾಜು ಪೂಜಾರಿ ಅವರನ್ನು ಗೌರವಿಸಲಾಯಿತು. ಅಮೃತ ಭಾರತಿ ವಿದ್ಯಾಲಯ ಅಧ್ಯಕ್ಷ ಶೈಲೇಶ್ ಕಿಣಿ, ಪಿಆರ್‌ಒ ವಿಜಯ್ ಕುವಾರ್ ಶೆಟ್ಟಿ, ವಿದ್ಯಾಕೇಂದ್ರ ಮುಖ್ಯಸ್ಥ ಅರುಣ್ ಎಚ್.ವೈ., ಅನಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಿಯಾ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net