

ಕುಂದಾಪುರ: ಮಕ್ಕಳಿಗೆ ಕಲಿಕೆ ಮಾತ್ರವಲ್ಲ, ಅವರು ಮುಂದೆ ಯಾವ ಪರಿಸ್ಥಿಯಲ್ಲಿಯೂ ಜೀವನ ನಡೆಸಬೇಕಾದಂತೆ ನಾವು ಅವರನ್ನು ರೂಪಿಸಬೇಕು. ಮಕ್ಕಳು ತಮ್ಮ ಮನೆಯಲ್ಲಿ ಕೆಲಸ ಮಾಡಬೇಕು. ಮುಂದಿನ ಜೀವನಕ್ಕೆ ಸಜ್ಜುಗೊಳಿಸಬೇಕು ಎಂದು ಸಿಎಸ್‌ಐ ಉಡುಪಿ ಪ್ರದೇಶದ ಅಧ್ಯಕ್ಷ ಐವನ್ ಡಿಸೋನ್ಸ್ ಹೇಳಿದರು.
ಕುಂದಾಪುರ ಯುಬಿಎಂಸಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸಿಎಸ್‌ಐ ಕೃಪಾ ವಿದ್ಯಾಲಯದ 12ನೇ ವರ್ಷದ ವಾರ್ಷಿಕೋತ್ಸವ, ಯುಬಿಎಂಸಿ ಅಂಗನವಾಡಿಯ ವಾರ್ಷಿಕೋತ್ಸವ ಗುರುವಾರ ನಡೆಯಿತು.
ಸಿಎಸ್‌ಐ ಕೃಪಾ ವಿದ್ಯಾಲಯ ಚರ್ಚ್ ಸಭಾಪಾಲಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಮ್ಮಾನುವೇಲ್ ಜಯಕರ್ ಆಶೀರ್ವಚನ ನೀಡಿದರು. ಶಿಕ್ಷಣ ಇಲಾಖೆ ಕುಂದಾಪುರ ಹೋಬಳಿ ನಿರ್ದೇಶಕ ಶೇಖರ್ ಪಡುಕೋಣೆ, ಕುಂದಾಪುರ ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಅಂಗನವಾಡಿ ಶಿಕ್ಷಕಿ ವಿದ್ಯಾ ಶುಭ ಹಾರೈಸಿದರು. ವಿದ್ಯಾರ್ಥಿ ನಾಯಕ ವಿಸ್ಮಿತ್ ಉಪಸ್ಥಿತರಿದ್ದರು.
ಸಂಸ್ಥೆ ಸಂಚಾಲಕಿ ಐರೆನ್ ಸಾಲಿನ್ಸ್ ಸ್ವಾಗತಿಸಿದರು. ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜ, ಸಿಎಸ್‌ಐ ಕೃಪಾ ಶಾಲೆ ಮುಖ್ಯ ಶಿಕ್ಷಕಿ ಸವಿತಾ ವರದಿ ವಾಚಿಸಿದರು. ವಿದ್ಯಾರ್ಥಿನಿ ಪ್ರಣತಿ, ಸಹಶಿಕ್ಷಕಿ ಪವಿತ್ರ ಕೊತ್ವಾಲ್ ವಂದಿಸಿದರು.