ಎರಡೆರಡು ಬಾರಿ ಫೇಲ್​ ಆಗಿದ್ದ ವಿದ್ಯಾರ್ಥಿ ಮನನೊಂದು ಸಾವಿಗೆ ಶರಣು…

puc student
Published on

ಬೆಂಗಳೂರು: ಕಾಲೇಜು ವಿದ್ಯಾರ್ಥಿಯೊಬ್ಬ ಎರಡೆರಡು ಬಾರಿ ಫೇಲ್​ ಆಗಿದ್ದೇನೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಯ್ಯಪ್ಪನಹಳ್ಳಿ ಬಳಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿದೆ.

ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ಚಾರ್ಲ್ಸ್(18) ಎಂದು ಗುರುತಿಸಲಾಗಿದೆ. ಈತ ಆರು ತಿಂಗಳ ಹಿಂದೆ ಪ್ರಥಮ ಪಿಯುಸಿಯಲ್ಲಿ ಫೇಲಾಗಿದ್ದು ನಂತರ ಮರು ಪರೀಕ್ಷೆಯಲ್ಲಿಯೂ ಪರೀಕ್ಷೆ ಬರೆದು ಫೇಲ್ ಆಗಿದ್ದ. ಈ ವೇಳೆ, ಕಾಲೇಜಿನವರು ಬೇರೆ ಕಾಲೇಜಿಗೆ ಸೇರಿಸುವಂತೆ ಹೇಳಿದ್ದರು.

ಮೊದಲ ಬಾರಿ ಫೇಲಾಗಿದ್ದಾಗಿನಿಂದಲೂ ಮನನೊಂದಿದ್ದ ಚಾರ್ಲ್ಸ್ ಪುನಃ ಫೇಲಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದ. ದುಃಖದಲ್ಲಿದ್ದ ಯುವಕ ಸಾಯುವ ನಿರ್ಧಾರ ತೆಗೆದುಕೊಂಡಿದ್ದು ಅದರಂತೆ ರಾತ್ರಿ 9:30ರ ಸುಮಾರಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .

ಸದ್ಯ ಚಾರ್ಲ್ಸ್ ಮೃತದೇಹವನ್ನು ಸಿವಿ ರಾಮನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net