

ಸರ್ಜಾಪುರ : ಕಳೆದ 2021ರಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಸ್.ಎಂ.ಶ್ರೀನಿವಾಸ್ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಭವಿಷ್ಯರೂಪಿಸಿಕೊಳ್ಳಲಿ ಎಂಬ ಆಶಯದೊಂದಿಗೆ ಜ್ಞಾನದ ಕಣಜವಾದ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂದಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ತಪ್ಪದೇ ಪತ್ರಿಕೆಗಳನ್ನು ಸರ್ಜಾಪುರ ಗ್ರಾಮ ಪಂಚಾಯಿತಿ ವತಿಯಿಂದ ಉಚಿತವಾಗಿ ವಿತರಣೆ ಮಾಡಲಾಗುತಿದೆ ಎಂದು ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯೆ ಡಾ.ಎನ್.ಕಲಾವತಿ ಮೂರ್ತಿಕುಮಾರ್ ತಿಳಿಸಿದರು.
ಸರ್ಜಾಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರೌಢಶಾಲೆ ಮತ್ತು ಸರ್ಕಾರಿ ಫ್ರೌಢ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸರ್ಜಾಪುರ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುತ್ತಿರುವ ವಿಜಯವಾಣಿ ವಿದ್ಯಾರ್ಥಿ ಮತ್ತು ಉದ್ಯೋಗ ಮಿತ್ರ ಪತ್ರಿಕೆಯನ್ನು ಸೋಮವಾರ ವಿತರಿಸಿ ಮಾತನಾಡಿದರು. ಸರ್ಕಾರಿ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯವರಾಗಿದ್ದು ಅವರಿಗೆ ಉತಮ ಶಿಕ್ಷಣ ನೀಡಲು ಪಾಲಕರು ಸಾಕಷ್ಟು ಶ್ರಮ ಪಡುತ್ತಾರೆ. ಆದರೆ ಕೇವಲ ಶೇ.5 ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕಂತೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಾರೆ. ಶೇ.95 ವಿದ್ಯಾರ್ಥಿಗಳು ದುಷ್ಟರ ಸಹವಾಸ ಮಾಡಿ, ಸಮಾಜದಲ್ಲಿ ಹೆತ್ತವರನ್ನು ಅವಮಾನಕ್ಕೆ ಒಳಪಡಿಸುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಗುರು ಹಿರಿಯರು ತೋರಿದ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಸರ್ಜಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯೆ ಮಮತಾ ರಮೇಶ್, ಸದಸ್ಯರಾದ ಲಲಿತಮ್ಮ, ಗಾಯತ್ರಿ ಪಸ್ರಾದ್, ಆರ್.ಕಿಟಕಿ ಶ್ರೀನಿವಾಸ್, ಅಭಿವೃದ್ಧಿ ಅಧಿಕಾರಿ ಸುಭಾನ್ ಖಾನ್, ಕಾರ್ಯದರ್ಶಿ ನಂಜಾ ರೆಡ್ಡಿ, ಲೆಕ್ಕಾಧಿಕಾರಿ ಸೋಮಶೇಖರ್, ಕರವಸೂಲಿಗಾರರಾದ ಮುನಿರಾಜು, ಲಕ್ಷ$್ಮಣ್, ಅಬ್ಬಯ್ಯ, ಸಂತೋಷ್ ಶಿಕ್ಷಕರಾದ ಕೆ.ಶೈಲಜಾ, ಜ್ಯೋತಿ, ಬಿ.ಎಂ ಹರೀಶ್, ರಮಾಮಣಿ, ನಿರ್ಮಲ, ಶಿವಶಂಕರ್, ಲಿಂಗಾರಾಜು, ರಾಜೇಶ್, ಸಿಬ್ಬಂದಿ ಮೇಸಿ ಮುನಿಯಪ್ಪ, ನಾಗರಾಜು, ಸುನೀಲ್ ಇದ್ದರು.
ಸಮಯ ವ್ಯರ್ಥ ಮಾಡಬೇಡಿ : ಗ್ರಾಪಂ ಮಾಜಿ ಅಧ್ಯಕ್ಷ ಎಸ್.ವಿ.ಶ್ರೀನಿವಾಸ್ ಬುಡಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಿನಿಮಾಗೆ ತೋರುವ ಆಸಕ್ತಿಯನ್ನು ಪಾಠ ಪ್ರವಚನದ ಕಡೆ ಹರಿಸಿದರೆ ಶೈಕ್ಷಣಿಕ ಸಾಧನೆ ಮಾಡಬಹುದಾಗಿದೆ. ಹಾಗಾಗಿ ಸಮಯ ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಲೆಯಲ್ಲಿ ಕಲಿತ ವಿಷಯದೊಂದಿಗೆ ವಿದ್ಯಾರ್ಥಿ ಮಿತ್ರ ಪತ್ರಿಕೆಯಲ್ಲಿ ಬರುವ ಪ್ರತಿ ವಿಷಯ ಅಧ್ಯಯನ ಮಾಡಬೇಕು ಮನೆಯಲ್ಲಿ ಉನ್ನತ ವ್ಯಾಸಂಗ ಅಥವಾ ಸ್ಪರ್ಧಾತ್ಮಕ ಪರೀೆಗಳಿಗೆ ತಯಾರಿ ಮಾಡುತ್ತಿರುವವರೊಂದಿಗೆ ಹಂಚಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.
ಕೀರ್ತಿ ತರಬೇಕು : ಗ್ರಾಪಂ ಮಾಜಿ ಉಪಾಧ್ಯಕ್ಷ ಎ.ಸತೀಶ್ ಕುಮಾರ್ ಮಾತನಾಡಿ, ಇತ್ತೀಚಿಗೆ ಮಾದಕ ವಸ್ತುಗಳು ಸಾಮಾಜಿಕ ಪಿಡುಗಾಗಿ ಕಾಡುತ್ತಿವೆ, ವಿದ್ಯಾರ್ಥಿಗಳು ಇಂತ ಜಾಲಕ್ಕೆ ಸಿಲುಕಿದರೆ ಭವಿಷ್ಯವೇ ನಶಿಸುತ್ತದೆ ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳು ದೈನಂದಿನ ಪಾಠದ ಜತೆಗೆ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಕೀರ್ತಿ ತರಬೇಕು ಎಂದರು. ಶಿಕ್ಷಕಿ ರಮಾಮಣಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಲ್ಲಿ ದೈನಂದಿನ ಪಾಠದ ಜತೆಗೆ ವಿದ್ಯಾರ್ಥಿ ಮಿತ್ರವೂ ಸಹಕಾರಿಯಾಗಿದೆ ಎಂದು ಶಿಕ್ಷಕಿ ರಮಾಮಣಿ ತಿಳಿಸಿದರು. ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಉತ್ತಮ ಸಾಧನೆ ಮಾಡಿದೆ ಇದಕ್ಕೆಲ್ಲ ಮುಖ್ಯ ಕಾರಣ ಸರ್ಜಾಪುರ ಗ್ರಾಮ ಪಂಚಾಯಿತಿ ಸಹಕಾರವಾಗಿದೆ ಎಂದರು.