ಮೋದಿ ಹಾಕಿ ಕೊಟ್ಟ ಹಾದಿ ಜನತೆಗೆ ಮಾದರಿ : ಸಂಸದ ಕ್ಯಾ.ಬ್ರಿಜೇಶ್ ಚೌಟ ಬಣ್ಣನೆ

New Project (1)
Published on

ಬಂಟ್ವಾಳ: ದೇಶದಲ್ಲಿ ಕಳೆದ 11 ವರ್ಷಗಳಿಂದ ಪ್ರಧಾನಿಯಾಗಿ ಜಾಗತಿಕಮಟ್ಟದಲ್ಲಿ ದೇಶಕ್ಕೆ ಗೌರವ ತಂದು ಬಲಿಷ್ಠ ರಾಷ್ಟ್ರವನ್ನಾಗಿಸಲು ಅವಿರತ ಶ್ರಮಿಸುತ್ತಿರುವ ಗಾಣಿಗ ಸಮಾಜದ ಹೆಮ್ಮೆಯ ಪ್ರಧಾನಿ ಮೋದಿ ಹಾಕಿ ಕೊಟ್ಟ ಹಾದಿ ಸಮಸ್ತ ಜನತೆಗೆ ಮಾದರಿ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘ ವತಿಯಿಂದ ಭಾನುವಾರ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಸಂದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿಭಾಗ ಮುಖ್ಯಸ್ಥ ಡಾ.ದುರ್ಗಾಪ್ರಸಾದ್ ನಿಟ್ಟೆ ಶೈಕ್ಷಣಿಕ ಉಪನ್ಯಾಸ ನೀಡಿದರು. ಬಾರ್ಕೂರು ಶ್ರೀ ವೇಣುಗೋಪಾಲ ದೇವಸ್ಥಾನ ಆಡಳಿತ ಮೊಕ್ತೇಸರ ಉದಯ ಕುಮಾರ್, ಮಂಗಳೂರು ಕರಾವಳಿ ಕ್ರೆಡಿಟ್ ಸೊಸೈಟಿ ಮಾಜಿ ಅಧ್ಯಕ್ಷ ತೇಜಪಾಲ್, ಅಧ್ಯಕ್ಷ ಎ.ಎಸ್.ವೆಂಕಟೇಶ್, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಉದ್ಯಮಿಗಳಾದ ಮಾಧವ ಎಸ್.ಮಾವೆ, ರಾಮಕೃಷ್ಣ ಬಾರ್ಕೂರು, ಜಿಲ್ಲಾ ಗಾಣಿಗ ಸಂ ಉಪಾಧ್ಯಕ್ಷ ರಮೇಶ್ ಮೆಂಡನ್ ಶುಭಹಾರೈಸಿದರು. ಪಂಜಿಕಲ್ಲು ಗ್ರಾಪಂ ಅಧ್ಯಕ್ಷೆ ನಳಿನಿ ಪ್ರಸಾದ್, ಬರಿಮಾರು ಗ್ರಾಪಂ ಅಧ್ಯಕ್ಷ ಸದಾಶಿವ ಬರಿಮಾರು, ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ವಿ.ಪಾಲ್ತಾಜೆ, ಬಾಳ್ತಿಲ ಗ್ರಾಪಂ ಉಪಾಧ್ಯಕ್ಷೆ ರಂಜಿನಿ, ಇಡ್ಕಿದು ಗ್ರಾಪಂ ಉಪಾಧ್ಯಕ್ಷ ಪದ್ಮನಾಭ ಇಡ್ಕಿದು, ಪ್ರಮುಖರಾದ ಅನಿಲ್ ಕುಮಾರ್ ಅತ್ತಾವರ, ಇಂಜಿನಿಯರ್ ಸಂತೋಷ್ ಮಣಿಹಳ್ಳ, ವಿಕ್ರಮ್ ಗಾಣಿಗ ಸಜೀಪ, ನರ್ಸಪ್ಪ ಅಮೀನ್, ಭುವನೇಶ್ ಮೊಗರ್ನಾಡು, ಸಚಿನ್ ಮೆಲ್ಕಾರ್, ನಿತ್ಯಾನಂದ ಸಫಲ್ಯ, ವೇದವ ಗಾಣಿಗ ಮತ್ತಿತರರಿದ್ದರು. ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿದರು. ತ್ರಿವೇಣಿ ನಿರೂಪಿಸಿದರು. ವಸಂತ್ ಪಿ. ವಂದಿಸಿದರು.

ಸಾಧಕರಿಗೆ ಗೌರವಾರ್ಪಣೆ

ಸಾಧಕ ವಿದ್ಯಾರ್ಥಿಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ವೇಯ್ಟಲಿಫ್ಟರ್ ಆದರ್ಶ್ ಭರತ್ ಗಾಣಿಗ ಅತ್ತಾವರ ಮತ್ತಿತರ ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net