

ಬೆಂಗಳೂರು: ನಗರದ ಬಿಎಂಟಿಸಿ ಬಸ್ ಕಂಡಕ್ಟರ್, ಡ್ರೈವರ್ ವಿದ್ಯಾರ್ಥಿನಿಯನ್ನು ನಿಂದಿಸಿ ಮಾರ್ಗಮಧ್ಯೆ ಇಳಿಸಿ ಅಮಾನವೀಯ ಘಟನೆ ನಡೆದಿದೆ.
ಬಿಎಂಟಿಸಿ ಕಂಡಕ್ಟರ್, ಇಬ್ಬರು ಪುರುಷ ಪ್ರಯಾಣಿಕರಿಂದ 9ನೇ ತರಗತಿಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿ ಪೋಷಕರು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಅಗಸ್ಟ್ 11ರಂದು ಶಾಲೆ ಮುಗಿಸಿಕೊಂಡು ಎಂದಿನಂತೆ ಬಿಎಂಟಿಸಿ ಬಸ್ ಹತ್ತಿರುವ ವಿದ್ಯಾರ್ಥಿನಿ. ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಇರುವ ಕಾರಣ ಆಧಾರ್ ಕಾರ್ಡ್ ತೋರಿಸಿದ್ದಾಳೆ. ಆಧಾರ್ ಕಾರ್ಡ್ ನೋಡಿದ ಕಂಡಕ್ಟರ್ ಇದರಲ್ಲಿ ಹಿಂದಿ ಅಕ್ಷರಗಳಿವೆ. ಆಧಾರ್ ಕಾರ್ಡ್ನಲ್ಲಿ ಕರ್ನಾಟಕದ ವಿಳಾಸ ಇದ್ದರೂ ಕನ್ನಡ ಇಲ್ಲ ಫ್ರೀ ಟಿಕೆಟ್ ನೀಡಲ್ಲ ಎಂದಿದ್ದಾರೆ. ಕಂಡಕ್ಟರ್ ವಿದ್ಯಾರ್ಥಿನಿಯ ಆಧಾರ್ ಕಾರ್ಡ್ ಕಿತ್ತುಕೊಂಡು ಎಲ್ಲಾ ಪ್ರಯಾಣಿಕರಿಗೆ ಆಧಾರ್ನಲ್ಲಿ ಕನ್ನಡಯಿಲ್ಲ ಅಂತ ತೋರಿಸಿದ್ದಾರೆ. ಆಗ ವಿದ್ಯಾರ್ಥಿನಿ ಯಾಕೆ ಆಧಾರ್ ಕಾರ್ಡ್ ಎಲ್ಲರಿಗೂ ತೋರಿಸ್ತಿರಾ ಅಂತ ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿನಿಗೆ ಇಬ್ಬರು ಸಹಪ್ರಯಾಣಿಕರು ನಿಂದಿಸಿದ್ದಾರೆ.
ಬಳಿಕ ಹಣ ಕೊಟ್ಟು ಟಿಕೆಟ್ ತೆಗೆದುಕೊಂಡಿರುವ ವಿದ್ಯಾರ್ಥಿನಿ. ಬಳಿಕ ವಿದ್ಯಾರ್ಥಿನಿ ಟಿಕೆಟ್ ಹರಿದು ಬಸ್ನಿಂದ ಇಳಿದುಕೊಳ್ತೇನೆ ಬಸ್ ನಿಲ್ಲಿಸಿ ಎಂದಿದ್ದಾಳೆ.ಆದರೆ ಕಂಡಕ್ಟರ್, ಡ್ರೈವರ್ ಬಸ್ ನಿಲ್ಲಿಸದೇ ಬೇರೊಂದು ಕಡೆ ನಿಲ್ಲಿಸಿದ್ದಾರೆ. ಅಲ್ಲಿವರೆಗೆ ಸುಮ್ಮನಿರದ ಕಂಡಕ್ಟರ್ ಆಧಾರ್ ಕಾರ್ಡ್ ನ್ನು ಬಸ್ ನಲ್ಲಿದ್ದ ಪ್ರಯಾಣಿಕರಿಗೆ ತೋರಿಸಿ ವಿದ್ಯಾರ್ಥಿನಿಗೆ ಮನಬಂದಂತೆ ಬೈದಿದ್ದಾನೆ. ಹಣ ನೀಡಿ ಟಿಕೆಟ್ ಪಡೆದರೂ ಕೂಡ ಬಸ್ನಿಂದ ಕೆಳಗೆ ಇಳಿಸಿದ್ದಾರೆ. ಈ ವೇಳೆ ಕಂಡೆಕ್ಟರ್ ಗೆ ಸಾಥ್ ಕೊಟ್ಟಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿ ತಾಯಿ ಮಂಜುಳಾರಿಂದ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಧಾರ್ ಕಾರ್ಡ್ನಲ್ಲಿ ಕನ್ನಡ ಇಲ್ಲ ಅಂತ ವಿದ್ಯಾರ್ಥಿನಿಗೆ ಕಂಡಕ್ಟರ್ ನಿಂದಿಸಿದ್ದಾರೆಂದು ಸಾಲು ಸಾಲು ಆರೋಪ ಮಾಡಿದ್ದಾರೆ.