

Kitchen Cleaning Tricks: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬಂತು. ಎಲ್ಲಾ ಜನ ಮನೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದರೆ. ಆದರೆ, ಇತರ ಭಾಗಗಳಿಗೆ ಹೋಲಿಸಿದರೆ, ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದು ಅತ್ಯಂತ ಕಷ್ಟಕರ ಕೆಲಸ. ಸಿಂಕ್ನಿಂದ ಪ್ರಾರಂಭವಾಗಿ ಮನೆಯ ಮೂಲೆ ಮೂಲೆ ಸ್ವಚ್ಛ ಮಾಡುವಷ್ಟರಲ್ಲಿ ಅರ್ಧ ದಿನ ಸಮಯವನ್ನೇ ತೆಗೆದುಕೊಳ್ಳುತ್ತದೆ. ಹಾಗಿದ್ದರೆ ಈ ಕೆಳಗೆ ತೋರಿಸಿದ ಮನೆಮದ್ದುಗಳನ್ನು ಬಳಸಿ ಇವು ನಿಮ್ಮ ಮನೆಯಲ್ಲಿ ಕೂತಿರುವ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಇದ್ದು, ಇದು ಗ್ರೀಸ್ ಮತ್ತು ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಎಣ್ಣೆ ಸೋರಿಕೆ ಅಥವಾ ಯಾವುದೇ ಕಲೆಗಳನ್ನು ತೆಗೆಯಲು ಇದು ಸಹಾಯ ಮಾಡುತ್ತದೆ. ನಿಂಬೆ ರಸವನ್ನು ಸೋಪಿನೊಂದಿಗೆ ಬೆರೆಸಿ ಉಜ್ಜುವುದರಿಂದ ಇದು ಸಂಪೂರ್ಣವಾಗಿ ಕಲೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ವಿನೇಗರ್ ಸೋಂಕು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಆದರಿಂದ ಇದನ್ನು ಬಳಸಿ ನೀವು ನಿಮ್ಮ ಅಡುಗೆ ಮನೆಯ ಟೈಲ್ಸ್, ಗ್ಯಾಸ್ ಧೂಳು ಕೂತಿರುವ ಪ್ರದೇಶಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದು ಕಲೆಗಳನ್ನು ತೊಳೆದು ಹಾಕಿ ಅಡುಗೆಮನೆಯನ್ನು ಹೊಳೆಯುವಂತೆ ಮಾಡುತ್ತದೆ.
ಅಡುಗೆ ಮನೆಯ ಕಲೆಗಳನ್ನು ತೆಗೆದುಹಾಕಲು ಅಡುಗೆ ಸೋಡಾ ಉಪಯುಕ್ತವಾದ ಸಾಧನವಾಗಿದೆ. ಇದನ್ನು ನಿಮ್ಮ ಮನೆಯ ಸಿಂಕ್, ಡ್ರೈನ್, ಓವ್, ಗ್ಯಾಸ್, ಇನ್ನಿತರ ಪ್ರದೇಶಗಳಿಗೆ ಇದನ್ನು ಹಾಕಿ ಉಜ್ಜಿದಾಗ ಅಲ್ಲಿರುವ ಕೊಳೆಗಳು ಸುಲಭವಾಗಿ ಬಿಟ್ಟುಹೋಗುತ್ತವೆ. ಇದನ್ನು ಬಳಸುವಾಗ ಆದಷ್ಟು ಜಾಗೃತವಾಗಿರಿ ಕೈಗಗಳಿಗೆ ಗ್ಲೌಸ್ಗಳನ್ನು ಬಳಸಿ.
ಅಕ್ಕಿ ತೊಳೆದ ನಂತರ ಆ ನೀರನ್ನು ಬಿಸಾಕುವ ಬದಲಿಗೆ ಅದನ್ನು ಗಾಜು, ಕನ್ನಡಿ, ಮತ್ತು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ತೊಳೆಯಲು ಬಳಸಿ. ಇದು ಸ್ವಚ್ಛಗೊಳಿಸಿ ಹೊಳಪು ನೀಡಲು ಸಹಾಯ ಮಾಡುತ್ತದೆ. ಇದು ಯಾವುದೇ ರೀತಿಯಲ್ಲೂ ಹಾನಿ ಮಾಡುವುದಿಲ್ಲ.
ಟೂತ್ಪೇಸ್ಟ್ಗಳು ಹಲ್ಲುಗಳಿಗೆ ಮಾತ್ರ ಹೊಳಪು ನೀಡುವುದಿಲ್ಲ. ಬದಲಿಗೆ ಬೆಳ್ಳಿ ಪಾತ್ರೆಗಳು, ನಲ್ಲಿಗಳು ಮತ್ತು ಟೈಲ್‌ಗಳ ಹೊಳಪಿಸಲು ಸಹಾಯ ಮಾಡುತ್ತದೆ. ಮೊದಲು ಒಂದು ಬೌಲ್ಗೆ ಪೇಸ್ಟ್ ಹಾಗು ನೀರನ್ನು ಹಾಕಿಕೊಂಡು ಬ್ರಷ್ನಿಂದ ಪಾತ್ರೆಗಳಿಗೆ ಉಜ್ಜಿ ಇದು ಒಳ್ಳೆಯ ಫಲಿತಾಂಶವನ್ನು ನೀಡಲು ಸಹಾಯ ಮಾಡುತ್ತದೆ.
1 ಬೌಲ್ ಲವಂಗವನ್ನು ಕುದಿಸಿ ಅಡುಗೆಮನೆ ಅಥವಾ ಮನೆಯ ಸುತ್ತಲೂ ಇರಿಸಿ. ಇದರ ಸುವಾಸನೆಯು ನಿಮ್ಮ ಮನೆಯ ತಾಜಾತನದಿಂದ ಇರುವಂತೆ ಮಾಡುತ್ತದೆ. ಹಾಗೆಯೇ ನೈಸರ್ಗಿಕವಾಗಿ ರೂಂ ಫ್ರೆಶ್ನರ್ ಆಗಿ ಬಳಸಬಹುದಾಗಿದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ