

ಬದಿಯಡ್ಕ: ಕೊಡಗಿನ ಗೌರಮ್ಮ 2024ನೇ ಸಾಲಿನ ಕಥಾಸ್ಪರ್ಧೆಯಲ್ಲಿ ಧನ್ಯಶ್ರೀ ಸರಳಿ ಅವರು ಬರೆದ ‘ಜೀವನ ಅಮೃತ ಸಮಾನ’ ಎಂಬ ಕತೆಗೆ ಪ್ರಥಮ ಪ್ರಶಸ್ತಿ ಲಭಿಸಿದೆ. ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲದ ಮಹಿಳಾ ಘಟಕದ ನೇತೃತ್ವದಲ್ಲಿ ಹವ್ಯಕ ಭಾಷೆಯಲ್ಲಿ ಆಯೋಜಿಸಲಾಗುವ ಕಥಾಸ್ಪರ್ಧೆ ಇದಾಗಿದೆ.
18 ಸ್ಪರ್ಧಿಗಳು ಭಾಗವಹಿಸಿದ್ದರು. ಕಥಾಸ್ಪರ್ಧೆ ಹಿರಿಯ ಲೇಖಕಿ, ಸಾಹಿತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ 24 ವರ್ಷಗಳಿಂದ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕಥಾವೇದಿಕೆ ಅಧ್ಯಕ್ಷೆಯಾಗಿ ಈಶ್ವರಿ ಬೇರ್ಕಡವು ನೇತೃತ್ವ ವಹಿಸಿದ್ದಾರೆ. ಅಧ್ಯಾಪಕ ನಾರಾಯಣ ಹೆಗಡೆ ಕುಂಬಳೆ, ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ.ಹರಿಕೃಷ್ಣ ಭರಣ್ಯ, ನಿವೃತ್ತ ಅಧ್ಯಾಪಕ ಬಾಲ ಮಧುರಕಾನನ ತೀರ್ಪುಗಾರರಾಗಿ ಸಹಕರಿಸಿದ್ದಾರೆ.