'ಟ್ರಂಪ್​ ಜತೆಗಿನ ಸೆಕ್ಸ್​ ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣಗಳು!' ಮಾಜಿ ಅಧ್ಯಕ್ಷನೊಂದಿಗಿನ ರಹಸ್ಯ ಬಿಚ್ಚಿಟ್ಟ ನೀಲಿತಾರೆ

trump
Published on

ವಾಷಿಂಗ್ಟನ್​: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲೇ ಇರುವ ಟ್ರಂಪ್​ ಜತೆಗಿನ ರಹಸ್ಯವನ್ನು ನೀಲಿತಾರೆಯೊಬ್ಬರು ಇದೀಗ ಬಿಚ್ಚಿಟ್ಟಿದ್ದಾರೆ. ಟ್ರಂಪ್​ ಜತೆಗೆ ಸೆಕ್ಸ್ ಮಾಡಿದ ಆ 90 ಸೆಕೆಂಡುಗಳು ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣಗಳು ಎಂದು ಆಕೆ ಹೇಳಿಕೊಂಡಿದ್ದಾಳೆ.

ನೀಲಿ ಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್​ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಟ್ರಂಪ್​ ಅವರ ಮಾಜಿ ವಕೀಲ ಮೈಕೆಲ್ ಕೋಹೆನ್ ಸ್ಟಾರ್ಮಿಯ ಸಂದರ್ಶನ ಮಾಡಿದ್ದು ಅದರಲ್ಲಿ ಆಕೆ ವಿಚಾರಗಳನ್ನು ಹೇಳಿದ್ದಾಳೆ. 2006ರಲ್ಲಿ ಟ್ರಂಪ್​ ಪತ್ನಿ ಮೆಲಾನಿಯಾಗೆ ಮಗುವಾಗಿತ್ತು. ಆಗ ಟ್ರಂಪ್​ ಸೆಕ್ಸ್​ಗಾಗಿ ನನ್ನ ಕರೆದಿದ್ದರು. ಹೋಟೆಲ್​ ರೂಮಿನ ಬೆಡ್​ನ ತುದಿಯಲ್ಲಿ ಬಹುತೇಕ ಬೆತ್ತಲಾಗಿ ಕುಳಿತು ನನಗಾಗಿ ಕಾಯುತ್ತಿದ್ದರು. ನಾನು ಅಲ್ಲಿಗೆ ಹೋದಾಗ, "ಇದು ನಿನ್ನ ಚಾನ್ಸ್​. ನಿನಗೆ ಇದು ಎಷ್ಟು ಕೆಟ್ಟದ್ದಾಗಿ ಬೇಕು ಎಂದು ತೋರಿಸು" ಎಂದು ಹೇಳಿದ್ದರು. ಅವರೊಂದಿಗೆ ಸೆಕ್ಸ್​ ಹೊಂದಿದ ಆ 90 ಸೆಕೆಂಡುಗಳು ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣಗಳು. ಈಗಲೂ ಅದನ್ನು ನೆನಪಿಸಿಕೊಂಡರೆ ನನ್ನ ಬಗ್ಗೆ ನನಗೇ ಅಸಹ್ಯ ಹುಟ್ಟುತ್ತದೆ ಎಂದು ಆಕೆ ತಿಳಿಸಿದ್ದಾರೆ.

ವಿವಾದಿತ ನೀಲಿ ತಾರೆ ಸ್ಟಾರ್ಮಿ 2018ರಲ್ಲಿ ಸುದ್ದಿಗೆ ಬಂದರು. 2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಬಗ್ಗೆ ಸುದ್ದಿಗಳು ಹರಡದಿರುವಂತೆ ನೋಡಿಕೊಳ್ಳಲು ಆಕೆ 1,30,000 ಡಾಲರ್​ನ್ನು ಕೋಹೆನ್​ಗೆ ನೀಡಿದ್ದಳು ಎಂದು ಆಗ ವರದಿಯಾಗಿತ್ತು. ಅದೇ ಕಾರಣದಿಂದಾಗಿ ಆಕೆ ಜೈಲುವಾಸವನ್ನೂ ಅನುಭವಿಸಬೇಕಾಯಿತು. ಈ ವಿಚಾರಕ್ಕೆ ಕೋಹೆನ್​ ಸಂದರ್ಶನದಲ್ಲಿಯೇ ಸ್ಟಾರ್ಮಿಗೆ ಕ್ಷಮೆಯನ್ನೂ ಕೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net