ವೆಬ್ ಸ್ಟೋರೀಸ್
ಹೌರಾ ಬ್ರಿಡ್ಜ್ ಮೇಲೆ ಸಿನಿಮಾ ಶೂಟಿಂಗ್; ವಿಜಯ್ ಸೇತುಪತಿ-ಸಾಯಿ ಪಲ್ಲವಿ ಫೋಟೋ ವೈರಲ್
ಹೌರಾ ಬ್ರಿಡ್ಜ್ ಮೇಲೆ ಸಿನಿಮಾ ಶೂಟಿಂಗ್; ವಿಜಯ್ ಸೇತುಪತಿ-ಸಾಯಿ ಪಲ್ಲವಿ ಫೋಟೋ ವೈರಲ್
ಕೋಲ್ಕತ್ತಾದ ಹೌರಾ ಬ್ರಿಡ್ಜ್ ಮೇಲೆ ಮಣಿರತ್ನಂ ಹೊಸ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ವಿಜಯ್ ಸೇತುಪತಿ-ಸಾಯಿ ಪಲ್ಲವಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಮಣಿರತ್ನಂ ಸಿನಿಮಾ
ರೋಜಾ, ನಾಯಗನ್, ಬಾಂಬೆ , ಅಲೈಪಾಯುದೆ, ಬಾಂಬೆ, ಕನ್ನತಿಲ್ ಮುತ್ತಮಿತ್ತಲ್ನಂತಹ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಮಣಿರತ್ನಂ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಕಾಂಬಿನೇಷನಲ್ಲಿ ಸಿನಿಮಾ ಮಾಡುತ್ತಿದ್ದಾರೆ.
96 ಸಿನಿಮಾ ನೆನಪು
ಸೋಶಿಯಲ್ ಮೀಡಿಯಾದಲ್ಲಿ ವಿಜಯ್ -ಸಾಯಿ ಪಲ್ಲವಿ ಶೂಟಿಂಗ್ ಫೋಟೋ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಈ ಫೋಟೋ 96 ಸಿನಿಮಾವನ್ನು ನೆನಪು ಮಾಡ್ತಿದೆ ಎನ್ನುತ್ತಿದ್ದಾರೆ.
ಫೋಟೋಗಳಲ್ಲೇನಿದೆ?
ಕಾಲೇಜ್ ಹುಡುಗನಂತೆ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ, ಜೀನ್ಸ್ ತೊಟ್ಟು ವಿಜಯ್ ಸೇತುಪತಿ ಮಿಂಚಿದ್ರೆ, ಗಾಢ ಕೆಂಪು ಬಣ್ಣದ ಮರೂನ್ ರೀತಿಯ ಗೌನ್ ತೊಟ್ಟು, ಕೂದಲು ಫ್ರೀ ಬಿಟ್ಟು, ಸಿಂಪಲ್ ಲುಕ್ನಲ್ಲಿ ಸಾಯಿಪಲ್ಲವಿ ಕಾಣಿಸಿಕೊಂಡಿದ್ದಾರೆ.
ಮಣಿರತ್ನಂ ಜೊತೆ ಸಿನಿಮಾ
ನಿರ್ದೇಶಕ ಮಣಿರತ್ಮಂ ಜೊತೆ ವಿಜಯ್ ಸೇತುಪತಿಗೆ ಇದು ಎರಡನೇ ಸಿನಿಮಾ. ಈ ಮೊದಲು 2018ರಲ್ಲಿ ಚೆಕ್ಕ ಚಿವಂತ ವಾನಮ್ ಮಾಡಿದ್ದರು. ಇನ್ನೂ ಸಾಯಿ ಪಲ್ಲವಿಗೆ ಇದು ಮೊದಲನೇ ಸಿನಿಮಾ

