ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಕಾರ್ಬೋಹೈಡ್ರೇಟ್‌ಗಳು

ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಕಾರ್ಬೋಹೈಡ್ರೇಟ್‌ಗಳು

Published on: 

ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಕಾರ್ಬೋಹೈಡ್ರೇಟ್‌ಗಳು

ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಕಾರ್ಬೋಹೈಡ್ರೇಟ್‌ಗಳು
ತೂಕ ಇಳಿಸಿಕೊಳ್ಳಲು ಎಲ್ಲಾ ಕಾರ್ಬೋಹೈಡ್ರೇಟ್ಸ್ ಕೆಟ್ಟದ್ದಲ್ಲ! ಸಂಸ್ಕರಿಸಿದ ಕಾರ್ಬ್ಸ್‌ಗಳ ಬದಲಿಗೆ ನಾರಿನಂಶ ಸಮೃದ್ಧವಾಗಿರುವ ಕಾಂಪ್ಲೆಕ್ಸ್ ಕಾರ್ಬ್ಸ್ ಸೇವಿಸುವುದರಿಂದ ಹೊಟ್ಟೆ ದೀರ್ಘಕಾಲ ತುಂಬಿರುತ್ತದೆ. ಇವು ದೇಹಕ್ಕೆ ನಿರಂತರ ಶಕ್ತಿ ನೀಡಿ, ಹಸಿವನ್ನು ನಿಯಂತ್ರಿಸುವ ಮೂಲಕ ಆರೋಗ್ಯಕರವಾಗಿ ತೂಕ ಇಳಿಸಲು ದಿವ್ಯೌಷಧಿಯಂತೆ ಕೆಲಸ ಮಾಡುತ್ತವೆ.

ಓಟ್ಸ್ (Oats)

ಓಟ್ಸ್ (Oats)
ಓಟ್ಸ್ ತೂಕ ಇಳಿಕೆಗೆ ಅತ್ಯುತ್ತಮ ಆಹಾರ. ಇದರಲ್ಲಿ ಬೀಟಾ-ಗ್ಲುಕನ್ ಎಂಬ ಕರಗುವ ನಾರಿನಂಶವಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಮೆಟಾಬಾಲಿಸಂ ಹೆಚ್ಚಿಸಿ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ

ಸಿರಿಧಾನ್ಯಗಳು (Millets)

ಸಿರಿಧಾನ್ಯಗಳು (Millets)
ನಮ್ಮ ದೇಶಿ ಆಹಾರಗಳಾದ ನವಣೆ, ಸಾಮೆ, ರಾಗಿ, ಮತ್ತು ಜೋಳದಲ್ಲಿ ಕಾರ್ಬೋಹೈಡ್ರೇಟ್ಸ್ ಜೊತೆಗೆ ಪ್ರೊಟೀನ್ ಮತ್ತು ಫೈಬರ್ ಅಧಿಕವಾಗಿರುತ್ತದೆ. ಇವು ನಿಧಾನವಾಗಿ ಜೀರ್ಣವಾಗುವುದರಿಂದ ದೇಹಕ್ಕೆ ದಿನವಿಡೀ ಶಕ್ತಿ ಸಿಗುತ್ತದೆ ಮತ್ತು ತೂಕ ಇಳಿಕೆ ಸುಲಭವಾಗುತ್ತದೆ.

ಬ್ರೌನ್ ರೈಸ್ (Brown Rice)

ಬ್ರೌನ್ ರೈಸ್ (Brown Rice)
ನೀವು ತೂಕ ಇಳಿಸುವಾಗ ಬಿಳಿ ಅಕ್ಕಿಯ ಬದಲು ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಬಳಸಿ. ಇದರಲ್ಲಿ ತೌಡು ಹಾಗೇ ಇರುವುದರಿಂದ ನಾರಿನಂಶ ಮತ್ತು ಪೋಷಕಾಂಶಗಳು ಸಮೃದ್ಧವಾಗಿರುತ್ತವೆ.

ಸಿಹಿ ಗೆಣಸು (Sweet Potatoes)

ಸಿಹಿ ಗೆಣಸು (Sweet Potatoes)
ಗೆಣಸಿನಲ್ಲಿ ಕಾರ್ಬ್ಸ್ ಇದ್ದರೂ, ಇದು ತೂಕ ಇಳಿಸಲು ತುಂಬಾ ಒಳ್ಳೆಯದು. ಇದರಲ್ಲಿ ನೀರಿನಂಶ ಮತ್ತು ಫೈಬರ್ ಹೆಚ್ಚಿರುತ್ತದೆ. ಇದರಲ್ಲಿರುವ ಕಾಂಪ್ಲೆಕ್ಸ್ ಕಾರ್ಬ್ಸ್ ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ತಡೆಯುತ್ತದೆ.

ಬೇಳೆಕಾಳುಗಳು (Legumes)

ಬೇಳೆಕಾಳುಗಳು (Legumes)
ಹೆಸರುಕಾಳು, ಕಡಲೆಕಾಳು, ಅವರೆಕಾಳು ಮತ್ತು ಮಸೂರ ಬೇಳೆಗಳಲ್ಲಿ ಆರೋಗ್ಯಕರ ಕಾರ್ಬ್ಸ್ ಜೊತೆಗೆ ಪ್ರೊಟೀನ್ ಅತ್ಯಧಿಕವಾಗಿರುತ್ತದೆ. ಇದು ಸ್ನಾಯುಗಳ ಬೆಳವಣಿಗೆಗೆ ನೆರವಾಗುವುದರ ಜೊತೆಗೆ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.

Related Stories

No stories found.