ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು

ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು

Published on: 

ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು

ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು
ಬೇಸಿಗೆ ಕಾಲದಲ್ಲಿ ತೀವ್ರ ಬಿಸಿಲು ಮತ್ತು ತಾಪಮಾನ ಏರಿಕೆಯಿಂದ ನಮ್ಮ ದೇಹದ ಮೇಲೆ ಹಲವಾರು ರೀತಿಯ ಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ, ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯೋಣ.

ನಿರ್ಜಲೀಕರಣ

ನಿರ್ಜಲೀಕರಣ
ಬಿಸಿಲಿಗೆ ಮೈಯಿಂದ ಅತಿಯಾಗಿ ಬೆವರು ಹರಿಯುವುದರಿಂದ ದೇಹದಲ್ಲಿನ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಬಾಯಿ ಒಣಗುವುದು, ಸುಸ್ತು ಮತ್ತು ತಲೆಸುತ್ತು ಕಾಣಿಸಿಕೊಳ್ಳಬಹುದು.

ಹೀಟ್​ ಸ್ಟ್ರೋಕ್​

ಹೀಟ್​ ಸ್ಟ್ರೋಕ್​
ಹೆಚ್ಚಿನ ತಾಪಮಾನಕ್ಕೆ ದೀರ್ಘಕಾಲ ಮೈಯೊಡ್ಡಿದಾಗ ದೇಹವು ತನ್ನ ಉಷ್ಣತೆಯನ್ನು ನಿಯಂತ್ರಿಸಲು ವಿಫಲವಾಗುತ್ತದೆ. ಇದು ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ತೀವ್ರ ಜ್ವರ, ವಾಂತಿ ಅಥವಾ ಪ್ರಜ್ಞೆ ತಪ್ಪುವಿಕೆಗೆ ಕಾರಣವಾಗಬಹುದು.

ಚರ್ಮದ ಸಮಸ್ಯೆಗಳು

ಚರ್ಮದ ಸಮಸ್ಯೆಗಳು
ಸೂರ್ಯನ ನೇರಳಾತೀತ ಕಿರಣಗಳಿಂದಾಗಿ ಚರ್ಮದ ಮೇಲೆ ಕೆಂಪು ಗುಳ್ಳೆಗಳು, ತುರಿಕೆ, ಬೆವರು ಗುಳ್ಳೆ ಮತ್ತು 'ಸನ್ ಬರ್ನ್' ಅಥವಾ ಚರ್ಮ ಕಪ್ಪಾಗುವಿಕೆ ಉಂಟಾಗುತ್ತದೆ.

ಜೀರ್ಣಕ್ರಿಯೆಯ ತೊಂದರೆಗಳು

ಜೀರ್ಣಕ್ರಿಯೆಯ ತೊಂದರೆಗಳು
ಬೇಸಿಗೆಯಲ್ಲಿ ಆಹಾರ ಬೇಗನೆ ಹಾಳಾಗುತ್ತದೆ. ಕಲುಷಿತ ನೀರು ಅಥವಾ ಆಹಾರ ಸೇವನೆಯಿಂದ ಅತಿಸಾರ, ವಾಂತಿ, ಮತ್ತು ಫುಡ್ ಪಾಯಿಸನಿಂಗ್ ಉಂಟಾಗುವ ಸಾಧ್ಯತೆ ಹೆಚ್ಚು.

ಕಣ್ಣಿನ ಸೋಂಕು

ಕಣ್ಣಿನ ಸೋಂಕು
ಬಿಸಿಲು ಮತ್ತು ಧೂಳಿನ ಕಾರಣದಿಂದ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಉರಿ ಅಥವಾ 'ಕಣ್ಣು ಬೇನೆ' ಹರಡುವ ಸಾಧ್ಯತೆ ಇರುತ್ತದೆ.

ಕಾಮಾಲೆ ಮತ್ತು ಟೈಫಾಯಿಡ್

ಕಾಮಾಲೆ ಮತ್ತು ಟೈಫಾಯಿಡ್
ಬೇಸಿಗೆಯಲ್ಲಿ ನೀರಿನ ಅಭಾವವಿರುವುದರಿಂದ, ಅಶುದ್ಧ ನೀರನ್ನು ಕುಡಿಯುವುದರಿಂದ ಕಾಮಾಲೆ ಮತ್ತು ಟೈಫಾಯಿಡ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

ಗಮನಿಸಿ

ಗಮನಿಸಿ
ಈ ಸಮಸ್ಯೆಗಳಿಂದ ಬಚಾವಾಗಲು ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರು ಕುಡಿಯಿರಿ. ಎಳನೀರು ಅಥವಾ ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳನ್ನು ಸೇವಿಸಿ ಮತ್ತು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ.

Related Stories

No stories found.