ಹೋಳಿ ಹಬ್ಬದಲ್ಲಿ ಈ ಐದು ಸ್ಕಿನ್‌ಕೇರ್ ಸಲಹೆಗಳನ್ನು ಪಾಲಿಸಿ

ಹೋಳಿ ಹಬ್ಬದಲ್ಲಿ ಈ ಐದು ಸ್ಕಿನ್‌ಕೇರ್ ಸಲಹೆಗಳನ್ನು ಪಾಲಿಸಿ

Published on: 

ಹೋಳಿ ಹಬ್ಬದಲ್ಲಿ ಈ ಐದು ಸ್ಕಿನ್‌ಕೇರ್ ಸಲಹೆಗಳನ್ನು ಪಾಲಿಸಿ

ಹೋಳಿ ಹಬ್ಬದಲ್ಲಿ ಈ ಐದು ಸ್ಕಿನ್‌ಕೇರ್ ಸಲಹೆಗಳನ್ನು ಪಾಲಿಸಿ
ಹೋಳಿ ಹಬ್ಬದ ಸಂಭ್ರಮದಲ್ಲಿ ರಾಸಾಯನಿಕ ಬಣ್ಣಗಳು ನಿಮ್ಮ ಚರ್ಮದ ಅಂದವನ್ನು ಕೆಡಿಸದಂತೆ ಎಚ್ಚರವಹಿಸುವುದು ಅಗತ್ಯ. ಬಣ್ಣಗಳಾಟದ ಮೊದಲು ಮತ್ತು ನಂತರ ಚರ್ಮವನ್ನು ರಕ್ಷಿಸಿಕೊಳ್ಳಲು ಇಲ್ಲಿವೆ 5 ಸರಳ ಹಾಗೂ ಪರಿಣಾಮಕಾರಿ ಸ್ಕಿನ್‌ಕೇರ್ ಟಿಪ್ಸ್. ತೆಂಗಿನ ಎಣ್ಣೆಯ ಬಳಕೆ, ಸನ್‌ಸ್ಕ್ರೀನ್ ಅಳವಡಿಕೆ ಮತ್ತು ನೈಸರ್ಗಿಕ ಬಣ್ಣಗಳ ಆಯ್ಕೆಯಂತಹ ಕ್ರಮಗಳು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿ, ಕಿರಿಕಿರಿ ತಪ್ಪಿಸುತ್ತವೆ.

ಎಣ್ಣೆ ಮಸಾಜ್​ ಮಡಿಕೊಳ್ಳಿ

ಎಣ್ಣೆ ಮಸಾಜ್​ ಮಡಿಕೊಳ್ಳಿ
ಬಣ್ಣ ಆಡಲು ಹೋಗುವ ಮುನ್ನ ಇಡೀ ದೇಹಕ್ಕೆ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮದ ಮೇಲೆ ಒಂದು ರಕ್ಷಣಾ ಪದರವನ್ನು ನಿರ್ಮಿಸುತ್ತದೆ. ಇದರಿಂದ ಬಣ್ಣಗಳು ಚರ್ಮದ ಒಳಗೆ ಹೋಗುವುದಿಲ್ಲ ಮತ್ತು ಆಟದ ನಂತರ ಬಣ್ಣವನ್ನು ಸುಲಭವಾಗಿ ತೊಳೆಯಲು ಸಹಾಯವಾಗುತ್ತದೆ.

ಸನ್‌ಸ್ಕ್ರೀನ್ ಬಳಸಿ

ಸನ್‌ಸ್ಕ್ರೀನ್ ಬಳಸಿ
ಹೋಳಿ ಹಬ್ಬವನ್ನು ಹೆಚ್ಚಾಗಿ ಬಿಸಿಲಿನಲ್ಲಿ ಆಡುವುದರಿಂದ, ಬಣ್ಣಗಳ ಜೊತೆಗೆ ಸೂರ್ಯನ ಕಿರಣಗಳು ಚರ್ಮಕ್ಕೆ ಹಾನಿ ಮಾಡಬಹುದು. ಆದ್ದರಿಂದ ಬಣ್ಣ ಆಡುವ 20 ನಿಮಿಷ ಮೊದಲು ಕನಿಷ್ಠ SPF 30 ಇರುವ ಸನ್‌ಸ್ಕ್ರೀನ್ ಅನ್ನು ಮುಖ ಮತ್ತು ಕೈಕಾಲುಗಳಿಗೆ ಹಚ್ಚಿಕೊಳ್ಳಿ.

ಪೂರ್ಣ ತೋಳಿನ ಬಟ್ಟೆ ಧರಿಸಿ

ಪೂರ್ಣ ತೋಳಿನ ಬಟ್ಟೆ ಧರಿಸಿ
ಚರ್ಮವು ಬಣ್ಣಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಪೂರ್ಣ ತೋಳಿನ ಹತ್ತಿ ಬಟ್ಟೆಗಳನ್ನು ಧರಿಸಿ. ಇದು ನಿಮ್ಮ ಚರ್ಮದ ಹೆಚ್ಚಿನ ಭಾಗವನ್ನು ಬಣ್ಣಗಳಿಂದ ಮತ್ತು ಸೂರ್ಯನ ಶಾಖದಿಂದ ರಕ್ಷಿಸುತ್ತದೆ.

ಉಗುರುಗಳನ್ನು ಕತ್ತರಿಸಿ

ಉಗುರುಗಳನ್ನು ಕತ್ತರಿಸಿ
ಬಣ್ಣಗಳು ಉಗುರುಗಳ ಸಂಧಿಯಲ್ಲಿ ಸೇರಿಕೊಂಡು ಕಲೆಯಾಗುತ್ತವೆ. ಇದನ್ನು ತಡೆಯಲು ಉಗುರುಗಳಿಗೆ ಗಾಢ ಬಣ್ಣದ ನೇಲ್ ಪಾಲಿಶ್ ಹಚ್ಚಿ. ಹಾಗೆಯೇ ಉಗುರುಗಳ ಸುತ್ತ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ಹಚ್ಚುವುದರಿಂದ ಬಣ್ಣ ಅಂಟಿಕೊಳ್ಳುವುದಿಲ್ಲ.

ನೈಸರ್ಗಿಕ ಬಣ್ಣಗಳ ಬಳಕೆ

ನೈಸರ್ಗಿಕ ಬಣ್ಣಗಳ ಬಳಕೆ
ರಾಸಾಯನಿಕಯುಕ್ತ ಬಣ್ಣಗಳು ಚರ್ಮದ ತುರಿಕೆ ಮತ್ತು ಅಲರ್ಜಿಗೆ ಕಾರಣವಾಗಬಹುದು. ಸಾಧ್ಯವಾದಷ್ಟು ಗಿಡಮೂಲಿಕೆ ಅಥವಾ ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸಿ. ಕೆಂಪು ಚಂದನ ಅಥವಾ ಅರಿಶಿನದ ಪುಡಿಯನ್ನು ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ.

Related Stories

No stories found.