ವೆಬ್ ಸ್ಟೋರೀಸ್
8 ವರ್ಷಗಳ ಬಳಿಕ ಡಿ55 ಚಿತ್ರದಲ್ಲಿ ಧನುಷ್ -ಸಾಯಿ ಪಲ್ಲವಿ ಜೋಡಿ
8 ವರ್ಷಗಳ ಬಳಿಕ ಡಿ55 ಚಿತ್ರದಲ್ಲಿ ಧನುಷ್ -ಸಾಯಿ ಪಲ್ಲವಿ ಜೋಡಿ
ಧನುಷ್ ಅಭಿನಯದ 55ನೇ ಚಿತ್ರದಲ್ಲಿ ಶ್ರೀಲೀಲಾ ಜತೆಗೆ ಸಾಯಿಪಲ್ಲವಿ ಕೂಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ತಮಿಳಿನ 'ಮಾರಿ 2'ದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಎಂಟು ವರ್ಷಗಳ ಬಳಿಕ ಮತ್ತೆ ಒಂದಾಗಿದೆ.
ಧನುಷ್ ಅವರ 55ನೇ ಚಿತ್ರಕ್ಕೆ ಇಬ್ಬರು ನಟಿಯರು
ಈ ಮೊದಲು 'ಡಿ-55' ಚಿತ್ರಕ್ಕೆ ಸಾಯಿಪಲ್ಲವಿ ನಾಯಕಿಯಾಗಿದ್ದರು, ಆದರೆ, ಡೇಟ್ಸ್ ಕಾರಣಕ್ಕೆ ಅವರ ಜಾಗಕ್ಕೆ ಶ್ರೀಲೀಲಾ ಬಂದಿದ್ದಾರೆ ಎನ್ನಲಾಗಿತ್ತು. ಅದು ಸುಳ್ಳಾಗಿದ್ದು, ಶ್ರೀಲೀಲಾ ಜತೆಗೆ ಸಾಯಿಪಲ್ಲವಿ ಕೂಡ ಚಿತ್ರದಲ್ಲಿರುವುದು ಖಚಿತವಾಗಿದೆ.
ನಿರ್ದೇಶಕ ಪೆರಿಯಸಾಮಿ ಜೊತೆ ಎರಡನೇ ಚಿತ್ರ
ಕಳೆದ ವರ್ಷ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದ್ದ “ಅಮರನ್' ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಿದ್ದರು. ಅದನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದರು.
ಈಗ ಮತ್ತೆ ಧನುಷ್ ಅಭಿನಯ 55ನೇ ಚಿತ್ರದಲ್ಲಿ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಜೊತೆ ಸಾಯಿಪಲ್ಲವಿ ಮತ್ತೆ ಕೆಲಸ ಮಾಡಲಿದ್ದಾರೆ.
ಸಾಯಿ ಪಲ್ಲವಿ-ಶ್ರೀಲೀಲಾ ಜುಗಲ್ ಬಂದಿ
ಧನುಷ್ 55ನೇ ಚಿತ್ರದಲ್ಲಿ ಒಬ್ಬರಲ್ಲ, ದಕ್ಷಿಣ ಭಾರತ ಇಬ್ಬರು ಖ್ಯಾತ ನಟಿಯರು ಅಭಿನಯಿಸುತ್ತಿದ್ದಾರೆ. ನಟಿ ಶ್ರೀಲೀಲಾ ಮತ್ತು ಸಾಯಿ ಪಲ್ಲವಿಯನ್ನು ಚಿತ್ರತಂಡ ಸ್ವಾಗತಿಸಿದೆ. ಈ ಮೂಲಕ ಇಬ್ಬರು ದಕ್ಷಿಣ ನಟಿಯರ ನಡುವೆ ಒಂದೇ ಸಿನಿಮಾದಲ್ಲಿ ಜುಗಲ್‌ಬಂದಿ ನಡೆಯಲಿದೆ.

