ಕಳವಾದ ಮೊಬೈಲ್​ ವಾರಸುದಾರರಿಗೆ ಹಸ್ತಾಂತರ

udp-9-mobile
Published on

ಉಡುಪಿ: ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್​ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 4,22,689 ರೂ.ಮೌಲ್ಯದ ವಿವಿಧ ಕಂಪೆನಿಯ 27 ಮೊಬೈಲ್​ಗಳನ್ನು ಪತ್ತೆಹಚ್ಚಿದ ಪೊಲೀಸರು ವಾರಸುದಾರರಿಗೆ ಬುಧವಾರ ಹಸ್ತಾಂತರಿಸಿದರು.

ಪೊಲೀಸ್​ ಉಪಾಧೀಕ್ಷಕ ಪ್ರಭು ಡಿ.ಟಿ. ಮಾತನಾಡಿ, ನಗರ ಠಾಣೆಯಲ್ಲಿ ಕೆಎಸ್​ಪಿ ಆ್ಯಪ್​ ಮೂಲಕ ಮೊಬೈಲ್​ ಕಳವಾದ ದೂರುಗಳು ಸ್ವೀಕರಿಸಲಾಗಿದ್ದು, ಅನಂತರ ಆ ಮೊಬೈಲ್​ಗಳನ್ನು ಸಿಎಸ್​ಆರ್​ ಪೋರ್ಟಲ್​ ಆಪ್ಲಿಕೇಶನ್​ ಅಡಿಯನ್ನು ಬ್ಲಾಕ್​ ಮಾಡಲಾಗಿದೆ. ಕಳೆದ 3 ತಿಂಗಳಲ್ಲಿ 32 ಮೊಬೈಲ್​ಗಳನ್ನು ಪತ್ತೆಹಚ್ಚಿ ಸುಮಾರು 5 ಮೊಬೈಲ್​ಗಳನ್ನು ಈಗಾಗಲೇ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದರು.

ನಗರ ಠಾಣೆಯ ನಿರೀಕ್ಷಕ ಮಂಜುನಾಥ ವಿ.ಬಡಿಗೇರ್​ ಹಾಗೂ ಪೊಲೀಸ್​ ಉಪನಿರೀಕ್ಷಕರಾದ ಪುನೀತ್​ ಕುಮಾರ್​ ಬಿಈ, ಈರಣ್ಣ ಶಿರಗುಂಪಿ, ಭರತೇಶ್​ ಕಂಕಣವಾಡಿ ಮತ್ತು ಗೋಪಾಲಕೃಷ್ಣ ಜೋಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net