ಟ್ರಂಪ್​ ಸುಂಕಾಘಾತಕ್ಕೆ ಷೇರು ಮಾರುಕಟ್ಟೆ ತಲ್ಲಣ!; ಕೋವಿಡ್​ ಬಳಿಕ ಭಾರೀ ಕುಸಿತ ಕಂಡ ಸೆನ್ಸೆಕ್ಸ್, ನಿಫ್ಟಿ | Stock Market

dk - 2025-04-07T103316.767
Published on

Stock Market : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಏರಿಕೆ ಹೇಳಿಕೆ ಮತ್ತು ಅಮೆರಿಕದಲ್ಲಿ ಹೆಚ್ಚುತ್ತಿರುವ ಆರ್ಥಿಕ ಹಿಂಜರಿತ ಕಾರಣದಿಂದಾಗಿ ಏಷ್ಯಾ ಸೇರಿದಂತೆ ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಏಕಾಏಕಿ ಭಾರೀ ಕುಸಿತ ಕಂಡಿದೆ.

ಬಿಎಸ್‌ಇ ಸೆನ್ಸೆಕ್ಸ್ ಸುಮಾರು ಶೇ.5 ರಷ್ಟು ಕುಸಿದು 3,100 ಅಂಕಗಳ ಕುಸಿತ ಕಂಡರೆ, ನಿಫ್ಟಿ ನಿಫ್ಟಿ ಕೂಡ 1,200 ಅಂಕಗಳ ಕುಸಿತದೊಂದಿಗೆ ಸೋಮವಾರ ವಹಿವಾಟು ಆರಂಭಿಸಿದೆ. ಕೋವಿಡ್ ನಂತರದ ಭಾರತೀಯ ಮಾರುಕಟ್ಟೆಗಳಲ್ಲಿ ಇದು ಅತಿದೊಡ್ಡ ಆರಂಭಿಕ ಕುಸಿತವಾಗಿದೆ ಎಂದು ಮಾರುಕಟ್ಟೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಕಪ್ಪು ಸೋಮವಾರ(Block Monday) ಉಲ್ಲೇಖಿಸಿದ್ದಾರೆ.

ಎಲ್ಲಾ 13 ಪ್ರಮುಖ ವಲಯಗಳು ಕುಸಿತ ಕಂಡಿದ್ದು, ವಿಶಾಲವಾದ ಸಣ್ಣ-ಕ್ಯಾಪ್ ಮತ್ತು ಮಧ್ಯಮ-ಕ್ಯಾಪ್ ವಲಯಗಳು ಕ್ರಮವಾಗಿ 10% ಮತ್ತು 7.3% ರಷ್ಟು ಕುಸಿದಿವೆ.

ಟ್ರಂಪ್ ಬುಧವಾರ ಭಾರೀ ಸುಂಕಗಳನ್ನು ಘೋಷಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮತ್ತು ಇತರ ಸರಕುಗಳ ಬೆಲೆಗಳು ಕುಸಿದಿದ್ದರಿಂದ ಅಂದಿನಿಂದ ಮಾರುಕಟ್ಟೆ ಷೇರುಗಳು ಕುಸಿತ ಕಂಡಿದ್ದು, ಇದು ಸೋಮವಾರ ಭಾರೀ ಹೊಡೆತ ಕೊಟ್ಟಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net