ಪೆಟ್ರೋಲ್​, ಡೀಸೆಲ್​ ತೆರಿಗೆಯಲ್ಲಿ ಬದಲಾವಣೆ ಇಲ್ಲ: ಇಂಧನ ದರ ಯಥಾಸ್ಥಿತಿ, ಜನರ ನಿರೀಕ್ಷೆ ಹುಸಿ

Petrol
Petrol Bunk
Published on

ಬೆಂಗಳೂರು: ಏರಿಕೆಯಾಗಿರುವ ಇಂಧನ ದರದ ಮೇಲಿನ ರಾಜ್ಯ ಸರ್ಕಾರದ ತೆರಿಗೆ ಇಳಿಸಿ ಕೊಂಚ ರಿಲೀಫ್​ ನೀಡಲಿದ್ದಾರೆಂಬ ಜನರ ನಿರೀಕ್ಷೆ ಈ ಬಾರಿಯ ಬಜೆಟ್​ನಲ್ಲಿ ಹುಸಿಯಾಗಿದೆ.

ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ರಾಜ್ಯ ಸರ್ಕಾರವು ಕರ್ನಾಟಕ ಮಾರಾಟ ತೆರಿಗೆ (ಕೆಎಸ್​ಟಿ)ಯನ್ನು ವಿಧಿಸುತ್ತದೆ. ಈ ದರವು ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಾಗಲೇ ಕಡಿಮೆ ಇದೆ. ಆದರೂ ಸಹ 2021-22ನೇ ಸಾಲಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರಗಳ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಹೆಚ್ಚಿಸದೇ ಸಾಮಾನ್ಯ ಜನರಿಗೆ ಆರ್ಥಿಕ ಹೊರೆಯಾಗದಂತೆ ಬಜೆಟ್​ನಲ್ಲಿ ಸೂತ್ರೀಕರಿಸಲಾಗಿದೆ ಎಂದು ಸಿಎಂ ಬಿಎಸ್​ವೈ ಬಜೆಟ್​ ಮಂಡನೆ ವೇಳೆ ತಿಳಿಸಿದರು.

ಇಂಧನ ದರದ ಮೇಲೆ ಯಾವುದೇ ತೆರಿಗೆ ಬದಲಾವಣೆ ಮಾಡದೇ ಇರುವುದರಿಂದ ರಾಜ್ಯದಲ್ಲಿ ಇಂಧನ ಬೆಲೆ ಯಥಾಸ್ಥಿತಿ ಮುಂದುವರಿಯಲಿದ್ದು, ತೆರಿಗೆ ಇಳಿಕೆಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಶಾಕ್​ ಆಗಿದೆ. ಈಗಾಗಲೇ ಇಂಧನ ದರ ನೂರರ ಗಡಿಯತ್ತ ಬಂದಿದೆ. ಇದರಿಂದ ಅಗತ್ಯವಸ್ತುಗಳ ಬೆಲೆಯು ಏರಿಕೆಯಾಗಿದ್ದು, ಈ ಆರ್ಥಿಕ ಹೊರೆ ಇನ್ನೆಷ್ಟು ದಿನ ಹೀಗೆ ಇರುತ್ತದೆ ಎಂಬುದೇ ಜನರ ಚಿಂತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net