ರಾಜ್ಯ ಬಜೆಟ್ 2024: ಮಾರುಕಟ್ಟೆಗಳ ಸಮಿತಿಗಳ ಡಿಜಿಟಲೈಸ್​ಗೆ 10 ಕೋಟಿ ರೂ., ಕೃಷಿಗೆ ಇನ್ನೇನು? ಇಲ್ಲಿದೆ ವಿವರ

Untitled-design-2024-02-16T112041.679
Published on

ಬೆಂಗಳೂರು: ಇಂದು ಬೆಳಗ್ಗೆ 10:15ಕ್ಕೆ 2024-25ನೇ ಸಾಲಿನ ಬಜೆಟ್ ಮಂಡನೆ ಶುರುಮಾಡಿದ ಸಿಎಂ ಸಿದ್ದರಾಮಯ್ಯ, ಬಜೆಟ್ ಮಂಡನೆಗೂ ಮುನ್ನ ವಿಶೇಷ ಸಂಪುಟ ಸಭೆ ನಡೆಸಿದರು. ಇದು ಸಿದ್ದರಾಮಯ್ಯ ಮಂಡಿಸುತ್ತಿರುವ 15ನೇ ಬಜೆಟ್ ಆಗಿದ್ದು, ಲೋಕಸಭೆ ಚುನಾವಣೆ ಹೊತ್ತಲ್ಲೇ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ಮಹತ್ವದ ಘೋಷಣೆಗಳು ಹೊರಬೀಳುವ ನಿರೀಕ್ಷೆಗಳಿತ್ತು. ಈ ಬೆನ್ನಲ್ಲೇ ಸಿಎಂ ಹಲವು ಬಹುನಿರೀಕ್ಷಿತ ಯೋಜನೆಗಳನ್ನು ಘೋಷಿಸಿದ್ದಾರೆ.

ಕೃಷಿ ಬಜೆಟ್​ನಡಿ, ದೊಡ್ಡನಗರ ಬಳಿಯ ವಿತರಣಾ ತೊಟ್ಟಿಯವರೆಗೂ ವಿಸ್ತರಣೆ, ಮೇಕೆದಾಟು ಯೋಜೆನೆಗೆ ಪ್ರತ್ಯೇಕ ಯೋಜನಾ ವಿಭಾಗ ಸ್ಥಾಪನೆ, ಮನ್ರೇಗಾ ಯೋಜನೆಯಡಿ 5 ಸಾವಿರ ಸಣ್ಣ ಸರೋವರ ನಿರ್ಮಾಣ, ಕೃಷ್ಇ ಉತ್ಪನ್ನ ಪಿಎಂಎಫ್ಎಂಇ ಯೋಜನೆಯಡಿ 80 ಕೋಟಿ ರೂ., ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ವಿಸ್ತರಣೆ ಮಾಡುವುದಾಗಿ ಇಂದಿನ ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ.

ಇದರೊಟ್ಟಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಮಿತಿಗಳ ಡಿಜಟಲೀಕರಣ, ಮಾರುಕಟ್ಟೆಗಳ ಸಮಿತಿಗಳ ಡಿಜಿಟಲೈಸ್​ಗೆ 10 ಕೋಟಿ ರೂ. ಮೀಸಲು, ರಾಯಚೂರಿನಲ್ಲಿ ಹೈಟೆಕ್​ ಒಣ ಮೆಣಸಿನಕಾಯಿ ಮಾರ್ಕೆಟ್​, 25 ಕೋಟಿ ರೂ. ವೆಚ್ಚದಲ್ಲಿ ಮೆಣಸಿನಕಾಯಿ ಮಾರುಕಟ್ಟೆ, ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ, 35 ಕೋಟಿ ರೂ. ವೆಚ್ಚದ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net