

ಮಧೂರು: ಶ್ರೀಸಿದ್ಧಿವಿನಾಯಕ ಮಹಾಗಣಪತಿ ದೇವಾಲಯದಲ್ಲಿ 2025 ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಬೇಕಾಗುವ ಅಕ್ಕಿ ಸಂಗ್ರಹಕ್ಕೆ ಭತ್ತದ ಕೃಷಿಗೆ ಭಾನುವಾರ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರದಲ್ಲಿ ಪ್ರಧಾನ ಆರ್ಚಕ ಶ್ರೀಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಏರಿಕ್ಕಳ ಬಯಲಿನಲ್ಲಿರುವ ವಯನಾಡು ಕುಲವನ್, ರಕ್ತೇಶ್ವರಿ ನಾಗಬನದ ಮುಂಭಾಗದಲ್ಲಿರುವ ವಿಶಾಲವಾದ ಭತ್ತದ ಗದ್ದೆಯಲ್ಲಿ ಭತ್ತದ ಬಿತ್ತನೆ ಕಾರ್ಯಕ್ರಮ ನೆರವೇರಿತು.
ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಮೊಕ್ತೇಸರ ಕೆ.ಕೆ.ಶೆಟ್ಟಿ ಬಿತ್ತನೆಗೆ ಚಾಲನೆ ನೀಡಿದರು. ಸಮಿತಿಯ ಸದಸ್ಯರಾದ ಜಯದೇವ ಖಂಡಿಗೆ, ಮಂಜುನಾಥ ಕಾಮತ್, ಗಿರೀಶ್, ಶೀನ ಶೆಟ್ಟಿ ಕಜೆ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೃಷಿಕ ಅಶೋಕ ಆಳ್ವರ ನೇತೃತ್ವದಲ್ಲಿ ಬಿತ್ತನೆ ನಡೆಯಿತು.